Important

ಮಳೆಯಿಂದ ಕೆಸರುಗದ್ದೆಯಾದ ರಸ್ತೆ : ಸ್ಥಳೀಯ ಪಂಚಾಯಿತಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿ ಸುಸ್ತಾದ ಸಾರ್ವಜನಿಕರು

ಸಿದ್ದಾಪುರ: ತಾಲೂಕಿನ ವಾಜಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ಲಮನೆಯಿಂದ ಸಿಂಗುಮನೆಗೆ ಹೋಗುವ ರಸ್ತೆಯು ಮಣ್ಣು ರಸ್ತೆಯಾಗಿದ್ದು ಈ ರಸ್ತೆ ತೀರಾ ಹದಗೆಟ್ಟಿದೆ. ಸಂಚಾರ ಮಾಡದಂತಹ ಸ್ಥಿತಿಗೆ ತಲುಪಿತ್ತು . ಹೀಗಾಗಿ ಅನಿವಾರ್ಯವಾಗಿ ಗ್ರಾಮಸ್ಥರೇ ರಸ್ತೆ ದುರಸಿ ಪಡೆಸಿಕೊಂಡಿದ್ದಾರೆ. ಸ್ಥಳೀಯ ಪಂಚಾಯಿತಿಗೆ ಹಾಗೂ ಜನಪ್ರತಿನಿಧಿಗಳಿಗೆ ಈ ಬಗ್ಗೆ ಸ್ಥಳೀಯರು ತಿಳಿಸಿದ್ದರು ಯಾವುದೇ ಕ್ರಮವಾಗದ ಕಾರಣ ಗ್ರಾಮಸ್ಥರೆ ದುರಸ್ಥಿಪಡಿಸಿಕೊಂಡಿದ್ದಾರೆ. ಮಳೆಗಾಲ ಆರಂಭವಾಗಿರುವುದರಿoದ ವಿದ್ಯಾರ್ಥಿಗಳಿಗೆ ಹಾಗೂ ವಾಹನ ಸಾರ್ವಜನಿಕರಿಗೆ ಓಡಾಟಕ್ಕೆ ಅನಾನುಕೂಲತೆ ಉಂಟಾಗುತ್ತಿರುವ ಹಿನ್ನೆಲೆ ಗ್ರಾಮಸ್ಥರೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.

ನೀರು ನಿಲ್ಲುವ ಜಾಗಕ್ಕೆ ಟ್ರ‍್ಯಾಕ್ಟರ್ ಮೂಲಕ ಮಣ್ಣು ತುಂಬಿಸಿ ಸಮತಟ್ಟು ಮಾ ರಸ್ತೆ ರಿಪೇರಿ ಮಾಡಿಕೊಂಡರು. ಸುತ್ಲಮನೆ, ಸಿಂಗುಮನೆ ಹೊಸಳಮಕ್ಕಿ ಗ್ರಾಮಸ್ಥರು ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Back to top button