Important
Trending

ಪುನರ್ವಸತಿ ಕೇಂದ್ರದ ಮನೆಯೊಂದರ ಮೇಲೆ ದಾಳಿ: ಅಕ್ರಮ ಗೋವಾ ಮದ್ಯ ಹಾಗೂ ಬಿಯರ್ ವಶ: ಆರೋಪಿಗೆ ನ್ಯಾಯಾಂಗ ಬಂಧನ

ಅಂಕೋಲಾ: ಅಕ್ರಮವಾಗಿ ಗೋವಾ ಸರಾಯಿ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ಅಂಕೋಲಾ ಅಬಕಾರಿ ಸಿಬ್ಬಂದಿಗಳು ದಾಳಿ ನಡೆಸಿ ಓರ್ವನನ್ನು ದಸ್ತಗಿರಿ ಮಾಡಿರುವ ಘಟನೆ ತಾಲೂಕಿನ ಹಾರವಾಡ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ನಡೆದಿದೆ.ಹಾರವಾಡ ನಿವಾಸಿ ನಾಗರಾಜ ನಾರಾಯಣ ಹರಿಕಂತ್ರ ಬಂಧಿತ ಆರೋಪಿಯಾಗಿದ್ದು ಆತನಿಂದ ಸುಮಾರು 3970 ರೂಪಾಯಿ ಮೌಲ್ಯದ 6 ಲೀಟರ್  ಗೋವಾ ಸರಾಯಿ,  15 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ.ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಬಕಾರಿ ಜಂಟಿ ಆಯುಕ್ತ ಮಂಗಳೂರು, ಜಿಲ್ಲಾ ಅಬಕಾರಿ ಉಪ ಆಯುಕ್ತ ಮತ್ತು ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಅಂಕೋಲಾ ಅಬಕಾರಿ ಕಚೇರಿ ಸಿಬ್ಬಂದಿ ಬಸಪ್ಪ ಅಂಗಡಿ, ಈರಣ್ಣ ಕುರುಬೇಟ, ರವಿ ಸಂಕಣ್ಣನವರ, ರಂಜನಾ ಡಿ ನಾಯ್ಕ ವಾಹನ ಚಾಲಕ ವಿನಾಯಕ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಬಕಾರಿ ನಿರೀಕ್ಷಕ ರಾಹುಲ ನಾಯಕ  ತಿಳಿಸಿದ್ದಾರೆ.                       

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button