Follow Us On

WhatsApp Group
Important
Trending

ಕಾರವಾರದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಯೋಗಾಭ್ಯಾಸ

ಕಾರವಾರ: ಇಲ್ಲಿನ ಅರಗಾದಲ್ಲಿರುವ ಐಎನ್ಎಸ್ ಕದಂಬ  ನೌಕಾನೆಲೆಗೆ ಎರಡು ದಿನದ ಭೇಟಿಗೆ ಆಗಮಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಕ್ರವಾರ ನೌಕಾನೆಲೆ ವ್ಯಾಪ್ತಿಯ ಕಾಮತ್ ಬೀಚ್ ನಲ್ಲಿ ಯೋಗಾಭ್ಯಾಸ ನಡೆಸಿದರು. ತಾಲ್ಲೂಕಿನ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ ಭೇಟಿ ನೀಡಿದ್ದ ರಾಜನಾಥ ಸಿಂಗ್ ನೌಕಾನೆಲೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು.

ರಾತ್ರಿ ನೌಕಾನೆಲೆಯಲ್ಲಿ ತಂಗಿದ್ದ ಅವರು ಇಂದು ಬೆಳಿಗ್ಗೆ ನೌಕಾನೆಲೆ ವ್ಯಾಪ್ತಿಯ ಕದಂಬ ಬೀಚ್ ನಲ್ಲಿ ಸೂರ್ಯೋದಯದ ವೇಳೆಗೆ ನೌಕಾನೆಲೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಯೋಗಾಭ್ಯಾಸ ನಡೆಸಿದರು. ಬಳಿಕ ಭಾರತೀಯ ನೌಕಾ ಜಲಾಂತರ್ಗಾಮಿ ನೌಕೆಯನ್ನು ಏರಿ ತೆರಳಿದ್ದು, ಈಡಿ ದಿನ ಕದಂಬ ನೌಕಾನೆಲೆಯಲ್ಲಿ ಇರಲಿದ್ದಾರೆ.

Back to top button