ಸಂಸದ ಅನಂತಕುಮಾರ ಹೆಗಡೆ ತನ್ನ ಮಾವನೆಂದು ನಂಬಿಸಿ ಮೋಸ ಮಾಡಿದ ಮಹಿಳೆ; ಪತ್ತೆಗಾಗಿ ವಿಶೇಷ ತಂಡ ರಚನೆ
ಮಹಿಳೆಯ ಖತರ್ನಾಕ್ ಐಡಿಯಾ ನೋಡಿ?
ಶಿರಸಿ: ಉತ್ತರಕನ್ನಡದ ಸಂಸದ ಅನಂತಕುಮಾರ ಹೆಗಡೆ ತನ್ನ ಮಾವನೆಂದು ನಂಬಿಸಿ, ಮಹಿಳೆಯೊಬ್ಬಳು ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿರಸಿ ಮೂಲದ ರೇಖಾ ಹೆಗಡೆ ಅಲಿಯಾಸ್ ಮೈತ್ರಿ ಎಂಬುವವಳು ಸಂಸದ ಅನಂತಕುಮಾರ ಹೆಗಡೆ ತನ್ನ ಸೋದರ ಸಂಬoಧಿ ಎಂದು ಪರಿಚಯಿಸಿಕೊಂಡು, ಹಲವರಿಗೆ ಪಂಗನಾಮ ಹಾಕಿದ್ದಾಳೆ.
ಮೈಸೂರಿನಲ್ಲಿ ಕುವೆಂಪು ನಗರ ನಿವಾಸಿ ಶ್ರೀಮತಿ ಮಂಜುಳಾ ಎಂಬುವವರ ಮನೆ ಬಾಡಿಗೆ ಪಡೆದು ವಾಸವಾಗಿದ್ದಳು. ನಂತರ ಸ್ವಂತ ಮನೆ ಕಟ್ಟುವ ಕಾರಣ ಹೇಳಿ ಸುಮಾರು ಲಕ್ಷ ರೂಪಾಯಿಗಳನ್ನು ಮಂಜುಳಾ ಬಳಿ ಪಡೆದಿದ್ದಳು ಎನ್ನಲಾಗಿದೆ. ಹಣವನ್ನು ಮರಳಿ ಕೊಡಲು ಕೇಳಿದಾಗ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ರೇಖಾ ಹೆಗಡೆ ಕೊನೆಗೂ ಅಲ್ಲಿಂದ ಪರಾರಿಯಾಗಿದ್ದಾಳೆ. ಫೋನ್ ಮೂಲಕ ಸಂಪರ್ಕಿಸಿ ಹಣಕ್ಕಾಗಿ ಒತ್ತಾಯಿಸಿದ ನಂತರ ಎರಡುವರೆ ಲಕ್ಷ ಹಣ ಹಿಂತಿರುಗಿಸಿದ್ದು ಉಳಿದ ಹಣ ಕೇಳಿದರೆ ಮತ್ತೊಮ್ಮೆ ಸಂಸದರ ಹೆಸರು ಹೇಳಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ,
ಇದರಿಂದ ಅನುಮಾನಗೊಂಡ ಮಹಿಳೆ ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನು ಸಂಪರ್ಕಿಸಿದ್ದು, ಈ ವೇಳೆ ಸಂಸದರು ಆ ಹೆಸರಿನ ಯಾವ ಮಹಿಳೆಯೂ ಪರಿಚಯವಿಲ್ಲ, ತನ್ನ ಸಂಬoಧಿಯಲ್ಲ ಎಂಬ ಉತ್ತಸಿದ್ದಾರೆ. ಮೈಸೂರಿನ ಮಹಿಳೆಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಇದೇ ವೇಳೆ ಹಣ ವಂಚನೆ ಹಾಗೂ ಸಂಸದರ ಹೆಸರನ್ನು ದುರುಪಯೋಗ ಮಾಡಿಕೊಂಡು ಗೌರವ ಘನತೆಗೆ ಚ್ಯುತಿ ತರುವ ಕೆಲಸ ಮಾಡಿದ ಆರೋಪದ ಕುರಿತು ಶಿರಸಿ ಪೋಲೀಸ್ ಠಾಣೆಯಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ಪ್ರಕರಣ ದಾಖಲಿಸಿದ್ದಾರೆ. ರೇಖಾ ಹೆಗಡೆ ಅಲಿಯಾಸ್ ಮೈತ್ರಿ ಎಂಬುವವಳ ಹುಡುಕಾಟಕ್ಕಾಗಿ ವಿಶೇಷ ತಂಡ ರಚಿಸಿದ್ದು, ತನಿಖೆ ಮುಂದುವರಿದಿದೆ.
ಇದೇ ವೇಳೆ ಆರೋಪಿ ಮಹಿಳೆ ಶಿರಸಿಯಲ್ಲಿ ಕೋಟ್ಯಾಂತರ ಮೌಲ್ಯದ ಅರಮನೆ ನಿರ್ಮಿಸುತ್ತಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ಇದೇ ರೀತಿಯ ಮೋಸ ಮಾಡಿರುವ ಕುರಿತು ಸಂಶಯ ವ್ಯಕ್ತವಾಗಿದೆ.
ವಿಸ್ಮಯ ನ್ಯೂಸ್, ಕಾರವಾರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.