Follow Us On

WhatsApp Group
Important
Trending

ಪೊಲೀಸನ‌ ಮನೆಗೆ ನುಗ್ಗಿದ ಕಳ್ಳರು: ಲಕ್ಷಾಂತರ‌ ರೂಪಾಯಿ ಕಳ್ಳತನ

ಚಾಕು ಹಿಡಿದು ಪೊಲೀಸ್ ಕ್ವಾಟ್ರಸ್ ಗೆ ಬಂದು ದುಷ್ಕೃತ್ಯ

ಭಟ್ಕಳ: ಕರ್ತವ್ಯಕ್ಕೆ ತೆರಳಿದ್ದ ಕಾನ್ಸ್‌ಟೇಬಲ್ ಮನೆಗೇ ನುಗ್ಗಿದ ಮುಸುಕುಧಾರಿಗಳು ಚಾಕು ತೋರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ಪಟ್ಟಣದ ಸಾಗರ ರಸ್ತೆಯ ಪೊಲೀಸ್ ಕ್ವಾಟ್ರಸ್‌ನಲ್ಲಿ ನಡೆದಿದೆ.

ಕಾನ್ಸ್‌ಟೇಬಲ್ ಸಂಗಮೇಶ್ ಎಂಬುವವರು ಕರ್ತವ್ಯಕ್ಕೆ ತೆರಳಿದ ಬಳಿಕ ಮನೆಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು ಅವರ ಪತ್ನಿಗೆ ಚಾಕು ತೋರಿಸಿದ್ದು ಮನೆಯ ಬೀರುವಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

ತಡರಾತ್ರಿ ಸುಮಾರು 12.15ರ ಸಮಯಕ್ಕೆ ಬಾಗಿಲು ಬಡಿದ ಶಬ್ದ ಕೇಳಿ ಗಂಡನೇ ಕರ್ತವ್ಯ ನಿರ್ವಹಿಸಿ ಮನೆಗೆ ಬಂದಿರಬಹುದೆಂದು ಭಾವಿಸಿದ ಪತ್ನಿ ನಾಗರತ್ನ ಬಾಗಿಲು ತೆಗೆದಿದ್ದಾರೆ. ಈ ವೇಳೆ ಚಾಕು ಹಿಡಿದ ಇಬ್ಬರು ಮುಸುಕುಧಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಮುಸುಕುಧಾರಿಗಳು ಆಕೆಗೆ ಕೂಗದಂತೆ ಬೆದರಿಸಿ ಮನೆಯ ಹಾಲ್‌ನಲ್ಲಿದ್ದ ಬೀರುವಿನಲ್ಲಿದ್ದ ವಸ್ತುವನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ.‌

ನಂತರ ಬೀರುವಿನಲ್ಲಿದ್ದ 1 ಲಕ್ಷ 40 ಸಾವಿರ ಮೌಲ್ಯದ 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 50 ಸಾವಿರ ಮೌಲ್ಯದ ಬಂಗಾರದ ಕಿವಿಯೋಲೆ, 10 ಸಾವಿರ ಮೌಲ್ಯದ 2 ಗ್ರಾಂ ತೂಕದ ಉಂಗುರ ಸೇರಿ ಅಂದಾಜು 2 ರಿಂದ 2.5 ಲಕ್ಷ ಬೆಲೆಬಾಳುವ ಆಭರಣ ದೋಚಿ ಪರಾರಿಯಾಗಿದ್ದಾರೆ.

ಮುಸುಕುದಾರಿಗಳು ಮಂಕಿ ಕ್ಯಾಪ್, ಕೈಗೆ ಗ್ಲೌಸ್, ಕಾಲಿಗೆ ಶೂ ಧರಿಸಿದ್ದು ಅವರಲ್ಲಿ ಓರ್ವ ಕನ್ನಡದಲ್ಲೇ ಮಾತನಾಡುತ್ತಿದ್ದ ಎಂದು ಕಾನ್ಸ್‌ಟೇಬಲ್ ಪತ್ನಿ ನಾಗರತ್ನಾ ಹೇಳಿಕೆ ನೀಡಿದ್ದಾಳೆ. ಘಟನೆ ನಡೆದ ಸ್ಥಳಕ್ಕೆ ಕಾರವಾರದ ಶ್ವಾನದಳ ಆಗಮಿಸಿದ್ದು ಪೋಲಿಸರು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button