Follow Us On

WhatsApp Group
Focus News
Trending

ದೇವಸ್ಥಾನ ನಿರ್ಮಾಣ ಮಾಡಿದವರು ಭಕ್ತರು, ಆದ್ದರಿಂದ ದೇವಸ್ಥಾನ ದ ಸಂಪೂರ್ಣ ಹಕ್ಕು ಭಕ್ತರಿಗೆ ಸೇರಿದೆ: ಸ್ವರ್ಣವಲ್ಲಿ ಶ್ರೀಗಳು

ಶಿರಸಿ: ದೇವಸ್ಥಾನಗಳನ್ನು ನಿರ್ಮಾಣ ಮಾಡಿದವರು ಭಕ್ತರು ಆದ್ದರಿಂದ ದೇವಸ್ಥಾನ ದ ಸಂಪೂರ್ಣ ಹಕ್ಕು ಭಕ್ತರಿಗೆ ಸೆರಿದ್ದು ಎಂದು ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಯವರು ನುಡಿದರು. ಅವರು ಶಿರಸಿ ನಗರದ ತೋಟಾಗರ್ ಕಲ್ಯಾಣ ಮಂಟಪದಲ್ಲಿ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳ ಶಿರಸಿ ಇವರ ಆಶ್ರಯದಲ್ಲಿ ನಡೆದ ದೇವಾಲಯಗಳ ಜಿಲ್ಲಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ದೇವಸ್ಥಾನಗಳ ಸ್ವಾಯತ್ತತೆ ಯನ್ನು ಕಾಪಾಡುವ ನಿಯಮಗಳು ಇದ್ದರೂ ಸಹ ಅದನ್ನು ಜಾರಿಗೆ ತರುತ್ತಿಲ್ಲ. ರಾಮಾಜೋಯಿಸ್ ವರದಿಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಹಿಂದೇಟುಹಾಕುತ್ತಿರಲು ಕಾರಣವೇನೆಂದು ತಿಳಿಯುತ್ತಿಲ್ಲ. ಸಮಾವೇಶ ಗಳನ್ನು ಮಾಡಿ ಸರ್ಕಾರಕ್ಕೆ ಶಿಫಾರಸ್ಸುನ್ನು ಮಾಡಲಾಗಿತ್ತು. ದೇವಸ್ಥಾನಗಳನ್ನು ನಿರ್ಮಾಣ ಮಾಡಿದವರು ಭಕ್ತರು .ಆಗಿದ್ದಾಗ ದೇವಸ್ಥಾನ ಗಳನ್ನು ನಡೆಸಲು ಭಕ್ತರಿಗೆ ಅವಕಾಶ ಕೊಡಬೇಕು. ಇದುವರೆಗೆ ಯಾವ ದೇವಸ್ಥಾನ ಗಳನ್ನೂ ಸರ್ಕಾರ ನಿರ್ಮಾಣ ಮಾಡಿಲ್ಲ.ಹಾಗೀರುವಾಗ ದೇವಸ್ಥಾನ ಗಳ ವಿಚಾರದಲ್ಲಿ ಮೂಗುತಿರುಸುವುದು ಯಾವ ನ್ಯಾಯ?ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.

ಸ್ವಾದಿ ಜೈನ ಮಠದ ಸ್ವಾಮೀಜಿ ಯವರು ಮಾತನಾಡಿ ರಾಜಕೀಯದಲ್ಲಿ ಧರ್ಮವಿರಬೇಕೆಹೊರತು ಧರ್ಮದಲ್ಲಿ ರಾಜಕೀಯ ಬರಬಾರದು . ಇತ್ತೀಚಿನ ದಿನಗಳಲ್ಲಿ ಸರ್ಕಾರ ಧರ್ಮದಲ್ಲಿ ರಾಜಕೀಯ ನಡೆಸುತ್ತಿದೆ. ದೇವಸ್ಥಾನಗಳ ಆಚರಣೆ ಪೂಜಾ ವಿಧಾನಗಳಬಗ್ಗೆ ಪ್ರಶ್ನಿಸುವುದು ಸರಿಯಾದ ಕ್ರಮವಲ್ಲ. ದೇವಸ್ಥಾನಗಳು ದೇವಸ್ಥಾನಗಳಾಗಿಯೇ ಇರಲಿ ಬದಲಿಗೆ ರಾಜಕೀಯ ಕೇಂದ್ರ ಗಳಾಗದಿರಲಿ ಎಂಬುದೆ ನಮ್ಮ ಆಶಯವಾಗಿದೆ ಎಂದರು.

ದಯಾನoದ ಗುರುಕುಲ ಹುಬ್ಬಳ್ಳಿ ಯ ಶ್ರೀ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ದೇವಾಲಯಗಳ ಸಮಸ್ಯೆ ಇಂದು ನಿನ್ನೆಯದಲ್ಲ ಅಥವಾ ಆಊರು ಈಊರಿನದೂ ಅಲ್ಲಾ ಬದಲಿಗೆ ಇಡೀ ರಾಷ್ಟ್ರದ ಸಮಸ್ಯೆಯಾಗಿದೆ. ದೇವಸ್ಥಾನಗಳ ವಿಚಾರದಲ್ಲಿ ಹಲವು ವರ್ಷಗಳಿಂದ ನ್ಯಾಯಾಲಯಗಳಲ್ಲಿ ಹೋರಾಟಗಳು ನಡೆಯೀತ್ತಿದೆ. ನಮ್ಮ ದೇವಸ್ಥಾನ, ನಮ್ಮ ಪೂಜಾ ವಿಧಾನಗಳನ್ನು ಅನುಸರಿಸಲು ನಮಗೆ ಸ್ವಾತಂತ್ರ‍್ಯ ವಿಲ್ಲದಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್ ಎನ್ ಭಟ್ ಯಲ್ಲಾಪುರ ಕೈಗೊಂಡ ನಿರ್ಣಯಗಳನ್ನು ಮಂಡಿಸಿದರು. ಹಿಂದೂ ದೇವಾಲಯಗಳನ್ನು ಭಕ್ತರಿಗೆ ಕೊಡುವಂತೆ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ಮಾತು ಶೀಘ್ರ ಜಾರಿಗೆ ತರಬೇಕು. ಮಂಡಳಿ ಸ್ವಾಗತಿಸುತ್ತದೆ. ಹಿಂದೂ ಸಮಾಜ ಸಂಘಟಿತ ರಾಗಲು ಜಾಗೃತ ರಾಗಬೇಕು. ಶತಮಾನಗಳಿಂದ ಮುಜುರಾಯಿ ಇಲಾಖೆ ಯಲ್ಲಿರುವ ದೇವಸ್ಥಾನ ಗಳನ್ನು ಹೊರತುಪಡಿಸಿ ಹೊಸ ದೇವಸ್ಥಾನಗಳನ್ನು ಸುಪರ್ದಿಗೆ ತೆಗೆದುಕೊಳ್ಳುವ ನಿರ್ಧಾರ ಮಾಡಬಾರದು ಎಂದರು,.

ವಿಸ್ಮಯ ನ್ಯೂಸ್, ಶಿರಸಿ

Back to top button