Big NewsImportant
Trending

ನ್ಯಾಶನಲ್ ಟ್ರೈಬಲ್ ಫೆಸ್ಟಿವಲ್‌ : ಉತ್ತರಕನ್ನಡಕ್ಕೆ ದ್ವಿತೀಯ ಸ್ಥಾನ

ಅಂಕೋಲಾ: ಪ್ರಾಕೃತಿಕ ಸಂಪತ್ತಿನ ಸಿರಿ ಸೊಬಗಿನ ಜೊತೆ ಜೊತೆಯಲ್ಲಿಯೇ ವೈವಿಧ್ಯಮಯ ಜನಜೀವನ,ಜಾನಪದ ಮತ್ತಿತರ ಕಲೆ-ಸಂಸ್ಕೃತಿಯ ತವರೂರೆಂದೇ ಉತ್ತರ ಕನ್ನಡ ಜಿಲ್ಲೆ ಪ್ರಸಿದ್ಧಿಯಾಗಿದೆ. ಇಲ್ಲಿಯ ಸಿದ್ಧಿ ಜನಾಂಗದವರು 75 ನೇ ಸ್ವಾತಂತ್ರ್ಯೋತ್ಸವ ವರ್ಷಾಚರಣೆ ಪ್ರಯುಕ್ತ   ನಡೆದ ನ್ಯಾಶನಲ್ ಟ್ರೈಬಲ್ ಫೆಸ್ಟಿವಲ್‌ ನಲ್ಲಿ ಅಂದರೆ ರಾಷ್ಟ ಮಟ್ಟದ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, ಅಲ್ಲಿ 75000 ನಗದು ಪುರಸ್ಕಾರದೊಂದಿಗೆ ದ್ವಿತೀಯ ಸ್ಥಾನ ಗಳಿಸುವ ಮೂಲಕ ನಮ್ಮ ಉತ್ತರ ಕನ್ನಡ ಜಿಲ್ಲೆಯ  ಕೀರ್ತಿ ಹೆಚ್ಚಿಸಿದ್ದಾರೆ . ಅಂಕೋಲಾ ಹಾಗೂ ಯಲ್ಲಾಪುರ ತಾಲೂಕಿನ ಬುಡಕಟ್ಟು ಸಿದ್ದಿ ಜನಾಂಗದ ಯುವಕರು ಇತ್ತೀಚೆಗೆ ಆಂಧ್ರದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರ ಮಟ್ಟದ ವಿಶೇಷ  ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ (Tribal Cultural Research and Training Mission) ಬುಡಕಟ್ಟು ಸಾಂಸ್ಕೃತಿಕ ಸಂಶೋಧನೆ ಹಾಗೂ ತರಭೇತಿ ಮಿಶನ್ ರವರು ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಏಕೈಕ ಬುಡಕಟ್ಟು ತಂಡವಾಗಿ ಅಂಕೋಲಾ ಹಾಗೂ ಯಲ್ಲಾಪುರ ಭಾಗವನ್ನೊಳಗೊಂಡ ಸಿದ್ಧಿ ಜೂಂಗದ ಪ್ರತಿಭಾವಂತ ಜನಪದ ಕಲಾವಿದರ ಸಿ ತಂಡದವರು ಸ್ಪರ್ಧೆಗೆ ಆಯ್ಕೆಯಾಗಿದ್ದರು.

ರಾಷ್ಟ್ರ ಮಟ್ಟದ ಬುಡಕಟ್ಟು ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ (National tribal dance festival) ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಸಿದ್ದಿ ಬುಡಕಟ್ಟು ಜನಾಂಗದವರು ರಾಷ್ಟ್ರಕ್ಕೆ ಎರಡನೇ ಸ್ಥಾನವನ್ನು ಪಡೆಯುವುದರೊಂದಿಗೆ ₹75,000 ನಗದು ಪುರಸ್ಕಾರ ಮತ್ತು  ಪ್ರಶಸ್ತಿಯನ್ನು ಗೆದ್ದಿದ್ದಾರೆ‌.

ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಜಿಲ್ಲೆಯ ಸಿದ್ಧಿ ಕಲಾವಿದರ  ಸಾಧನೆ ಅಂಕೋಲಾ , ಯಲ್ಲಾಪುರ, ಶಿರಸಿ ತಾಲೂಕಿಗೆ ಅಷ್ಟೇ ಅಲ್ಲದೇ ಉತ್ತರಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ಸಾಂಸ್ಕೃತಿಕ ಕಲಾ ವೈಭವಕ್ಕೆ ಹಿರಿಮೆ ಮೂಡಿಸಿದಂತಾಗಿದೆ. ಡಮಾಮಿ ಎಂದರೆ ಸಿದ್ಧಿ ತಂಡದ ವಿಶೇಷ .ನೃತ್ಯ ವಾಗಿದ್ದು,ದೊಡ್ಡ ದೊಡ್ಡ ಉತ್ಸವಗಳು,ಮೆರವಣಿಗೆ,ರೆಸಾರ್ಟ್ ಗಳಲ್ಲಿ ನಡೆಯುವ ಫೈಯರ್ ಕ್ಯಾಂಪ್, ಮತ್ತಿತರ ಹಲವೆಡೆ ಬೇಡಿಕೆ ಪಡೆದಿದೆ. ಇವರ ಉಡುಗೆ ತೊಡುಗೆ, ಹಾವ ಭಾವ, ವಾದ್ಯ – ಮೇಳಗಳು ಕಣ್ಮನ ಸೆಳೆಯುತ್ತವೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹೆಚ್ಚಿನ ಕಲಾವಿದರ ಜೊತೆಯಲ್ಲಿ-ಯಲ್ಲಾಪುರದ ಮೂವರು ಮತ್ತು ಶಿರಸಿಯ ಓರ್ವ ಸೇರಿ  ಗುಂಪು ಕುಣಿತ ಪ್ರದರ್ಶಿಸಿದ್ದರು.   

ಸಿದ್ದಿ ಬುಡಕಟ್ಟು ಜನಾಂಗದ ಕಲಾವಿದರಾದ ಅರುಣ ಸಿದ್ದಿ,ಕಿರಣ ಸಿದ್ದಿ,ಮೋಹನ ಸಿದ್ದಿ,ವಸಂತ ಸಿದ್ದಿ,ಪುಟ್ಟಯ್ಯ ಸಿದ್ದಿ,ರಾಘವೇಂದ್ರ ಸಿದ್ದಿ,ನಾಗರಾಜ ಸಿದ್ದಿ,ಮಹೇಶ ಸಿದ್ದಿ, ಶಶಿಕಾಂತ ಸಿದ್ದಿ,ಪ್ರಶಾಂತ ಸಿದ್ದಿ,ಮಹಾಬಲೇಶ್ವರ ಸಿದ್ದಿ,ಮಂಜುನಾಥ ಸಿದ್ದಿ,ಸಂತೋಷ ಸಿದ್ದಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರ ವಿಶೇಷ ಕಲಾ ಸಾಧನೆಗೆ ನಮ್ಮದೊಂದು ಮೆಚ್ಚುಗೆ ಇರಲಿ.  

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button