Follow Us On

WhatsApp Group
Important
Trending

ಕಾರಿನಲ್ಲಿ ಗಾಂಜಾ ಸಾಗಾಟ : ಮೂವರು ಆರೋಪಿಗಳ ಬಂಧನ

ಕುಮಟಾ: ಇಲ್ಲಿನ ಹೆರವಟ್ಟಾದ ರೈಲ್ವೆ ಸೇತುವೆ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ರಾಮನಗರದ ಬಿಡದಿ ನಿವಾಸಿ ಗಣೇಶಮೂರ್ತಿ (31) , ಶಿರಸಿಯ ರಾಗಿಹೊಸಳ್ಳಿ ಹೆಬ್ರಿ ನಿವಾಸಿ ರಾಜೇಶ ಅಂಬಿಗ (25), ಲಕ್ಷ್ಮಣ ಅಂಬಿಗ (20) ಬಂಧಿತ ಆರೋಪಿಗಳು.

ಈ ಮೂವರು ಫೋರ್ಡ್ ಕಾರಿನಲ್ಲಿ 495 ಗ್ರಾಂ ಗಾಂಜಾ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಗಾಂಜಾ ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗಾಂಜಾ ಸಾಗಾಣಿಕೆಗೆ ಬಳಸಲಾದ ಕಾರನ್ನ ಕೂಡ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸಿಪಿಐ ತಿಮ್ಮಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಪಿಎಸ್‌ಐ ರವಿ ಗುಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button