ಕಾರವಾರ: ನೀರು ಕುಡಿಯಲು ಬಂದ ವೇಳೆ ಕಂಪೌಡ್‌ನ ಕಬ್ಬಿಣದ ಗೇಟ್‌ಗೆ ಬಡಿದು ಸ್ಥಳದಲ್ಲೇ ಕಡವೆ ಮರಿಯೊಂದು ಸಾವನ್ನಪ್ಪಿದ ಘಟನೆ ಇಲ್ಲಿನ ಶೇಜವಾಡದಲ್ಲಿ ನಡೆದಿದೆ. ಮೃತಪಟ್ಟ ಕಡವೆ ಮರಿ ಮೂರು ವರ್ಷದ್ದು ಎಂದು ಅಂದಾಜಿಸಲಾಗಿದೆ.
ನೀರು ಕುಡಿದು ಅವಸರದಲ್ಲಿ ಓಡುವಾಗ ಕಬ್ಬಿಣದ ಗೇಟ್ ಗಮನಿಸದೇ ಅದಕ್ಕೆ ಬಡಿದ ಪರಿಣಾಮ ಕಡವೆ ಮರಿ ಸಾವನ್ನಪ್ಪಿದೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದ್ದಾರೆ.
ವಿಸ್ಮಯ ನ್ಯೂಸ್ ಕಾರವಾರ