Big NewsImportant
Trending

ಧಾರವಾಡ ವಿಶ್ವವಿದ್ಯಾಲಯದ ಎಂ.ಎ. ಸಂಗೀತ ವಿಷಯದಲ್ಲಿ ಚಿನ್ನದ ಪದಕ ಪಡೆದು ಸಾಧನೆ: ಸಂಗೀತಾ ನಾಯ್ಕಗೆ ಅಭಿನಂದನೆ

ಹೊನ್ನಾವರ: ತಾಲೂಕಿನ ಹಡಿನಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಗೇರಿ ಲಕ್ಷಣ ನಾಯ್ಕ ಹಾಗೂ ಜಯಾ ನಾಯ್ಕರವರ 3ನೇ ಪುತ್ರಿಯಾದ ಸಂಗೀತಾ ನಾಯ್ಕ ಧಾರವಾಡ ವಿಶ್ವವಿದ್ಯಾಲಯದ ಎಂ.ಎ. ಸಂಗೀತ ವಿಷಯದಲ್ಲಿ ಚಿನ್ನದ ಪದಕ ಪಡೆದು, ಸಾಧನೆ ಮಾಡಿದ್ದಾಳೆ. ಈ ಮೂಲಕ ತಾಲೂಕಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ನನ್ನ ಈ ಸಾಧನೆಗೆ ರಾಗಶ್ರೀ ಸಂಗೀತ ಶಾಲೆ ಹಾಗೂ ಎಸ್‌ಡಿಎಂ ಕಾಲೇಜು, ಧಾರವಾಡ ವಿಶ್ವವಿದ್ಯಾಲಯದ ಗುರುಗಳ ಹಾಗೂ ಮನೆಯವರ ಪ್ರೋತ್ಸಾಹವೇ ಕಾರಣ ಎಂದು ಸಂಗೀತಾ ನಾಯ್ಕ ಹೇಳಿದ್ದಾಳೆ.

ಇದೀಗ ಎಸ್‌ಡಿಎಂ ಪದವಿ ಕಾಲೇಜಿನ ಸಂಗೀತ ವಿಭಾಗದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ಕುಟುಂಬದಿoದಬಂದರೂ ಅಸಾಧಾರಣಾ ಸಾಧನೆ ಮಾಡುತ್ತಾ, ಕುಟುಂಬದವರ, ಶಿಕ್ಷಕರ ಪ್ರೋತ್ಸಾಹದ ಫಲದಿಂದಲೇ ಶರಾವತಿ ಉತ್ಸವ, ಯುವಜನಮೇಳ, ಕರಾವಳಿ ಉತ್ಸವ, ಮಲೆನಾಡು ಉತ್ಸವದಂತಹ ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗಮನಸೆಳೆದಿದ್ದಾಳೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button