Important
Trending

ಅಡ್ಡಾದಿಡ್ಡಿ ಕಾರು ಓಡಿಸಿ ಸಿಕ್ಕಸಿಕ್ಕವರಿಗೆ ಡಿಕ್ಕಿ: ಓರ್ವ ಮಹಿಳೆ ಗಂಭೀರ, ಇನ್ನೊಬ್ಬರಿಗೆ ಗಾಯ

ಶಿರಸಿ: ಇಲ್ಲೊಬ್ಬ ಪುಣ್ಯಾತ್ಮ ಅಡ್ಡಾದಿಡ್ಡಿ ಕಾರು ಓಡಿಸಿ ಸಿಕ್ಕಸಿಕ್ಕವರಿಗೆ ಡಿಕ್ಕಿ ಹೊಡೆದಿದ್ದಾನೆ. ಈತನಿಂದ ತಪ್ಪಿಸಿಕೊಂಡರೆ ಸಾಕಪ್ಪ ಅಂತ ಕೆಲವು ಅಲ್ಲಿಂದ ಓಡಿದ್ದಾರೆ. ಇನ್ನು ಕೆಲವರು ಆತಂಕದಿoದ ಏನಾಗುತ್ತಿದೆ ಅಂತಾ ನೋಡುತ್ತಿದ್ದಾರೆ. ಹೌದು, ನಗರದ ಟಿಎಸ್ ಎಸ್ ರಸ್ತೆಯ ಎಪಿಎಂಸಿ ಗೇಟ್ ಬಳಿ ಕಾರೊಂದು ಅಡ್ಡಾದಿಡ್ಡಿ ಚಲಿಸಿ, ಎರಡು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಅಡ್ಡಾದಿಡ್ಡಿ ಕಾರುಚಲಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪಘಾತದ ರಸಭಕ್ಕೆ ಸ್ಕೂಟಿ ಚಾಲಿಸುತ್ತಿದ್ದ ಓರ್ವ ಮಹಿಳೆಯ ಕುತ್ತಿಗೆ ಬಳಿ ತೀವ್ರ ಗಾಯಗಳಾಗಿದೆ. ಕಾರು ಚಾಲಕನು ತಿರುವಿನಲ್ಲಿ ಅಡ್ಡಾದಿಡ್ಡಿ ಚಲಿಸಿ, ಮುಂದೆ ಸಾಗುತ್ತಿದ್ದ ಎರಡು ಸ್ಕೂಟಿಗಳಿಗೆ ಹಿಂಬದಿಯಿoದ ಗುದ್ದಿದ್ದಾನೆ. ಗಂಭೀರವಾಗಿ ಗಾಯಗಳಾಗಿರುವ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ. ಕಾರಿನಲ್ಲಿದ್ದ ಚಾಲಕ ನಾಪತ್ತೆಯಾಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button