Focus News
Trending

ಅಮೆರಿಕಾದಲ್ಲಿ ವಾಸವಾಗಿರುವ ಹಳೆಯ ವಿದ್ಯಾರ್ಥಿಯಿಂದ ನಲಿ-ಕಲಿ ಶಿಕ್ಷಣಕ್ಕೆ ಅಗತ್ಯವಿರುವ ವಸ್ತು ದಾನ

ಇಂದು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಪಾಠೋಪಕರಣ ಮತ್ತು ಪೀಠೋಪಕರಣಗಳ ಸೌಲಭ್ಯ ನೀಡುವಲ್ಲಿ ಹಿಂದಿವೆ. ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಮರಳಿ ಸಹಾಯ ಮಾಡಿದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವೆ ಎಂದು ವಂದೂರು ಮೂಲದವರಾಗಿದ್ದು ಸದ್ಯ ಅಮೆರಿಕದಲ್ಲಿ ವಾಸವಾಗಿರುವ ಶ್ವೇತಾ ಭಟ್ ಅಭಿಪ್ರಾಯಪಟ್ಟರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಂದೂರಿಗೆ ನಲಿ-ಕಲಿ ಶಿಕ್ಷಣಕ್ಕೆ ಅಗತ್ಯವಿರುವ ವಸ್ತುಗಳನ್ನು ದಾನವಾಗಿ ನೀಡಿ ಮಾತನಾಡಿದರು.
ಪ್ರತಿ ಮನುಷ್ಯನ ಜೀವನದಲ್ಲಿ ಅವನ ಪ್ರಾಥಮಿಕ ಶಿಕ್ಷಣದ ಹಂತ ಪ್ರಮುಖವಾದದ್ದು ಇದು ಮನೆಯ ಪಂಚಾಂಗ ಇದ್ದಂತೆ ನಾವು ಇಂದು ಏನೇ ಸಾಧನೆ ಮಾಡಿದ್ದರೂ ಅದಕ್ಕೆ ನಾವು ಕಲಿತ ಶಾಲೆ ಮತ್ತು ನಮಗೆ ಕಲಿಸಿದ ಶಿಕ್ಷಕರೇ ಕಾರಣ ಹಾಗಾಗಿ ಶಾಲೆಯ ಋಣವನ್ನು ತೀರಿಸಲು ಅವಕಾಶಕ್ಕೆ ಚಿರಋಣಿಯಾಗಿದ್ದೇನೆ ಎಂದರು.

ಶಾಲೆಯ ಮತ್ತೋರ್ವ ಪೂರ್ವ ವಿದ್ಯಾರ್ಥಿ ಪ್ರಶಾಂತ್ ಹೆಗಡೆ ಮಾತನಾಡಿ ಶಾಲೆ ಮತ್ತು ಶಾಲೆಯ ಪೂರ್ವ ವಿದ್ಯಾರ್ಥಿಗಳನ್ನು ಜೋಡಿಸುವ ಕೆಲಸವಾಗಬೇಕು ಶಾಲೆಯ ಅಗತ್ಯತೆಗಳ ಪಟ್ಟಿಯನ್ನು ಶಾಲೆಯಿಂದ ಪಡೆದುಕೊಂಡಿತು ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ದಾನಿಗಳನ್ನು ಸಂಪರ್ಕಿಸಿ ಶಾಲೆಗೆ ಪೂರೈಸಲಾಗುವುದು ಎಂದರು. ವೇದಿಕೆಯಲ್ಲಿ ಶಿಕ್ಷಕರಾದ ಶಂಕರ ನಾಯ್ಕ, ದೇವರು ಭಟ್ಟ, ಜಿ.ಕೆ.ಹೆಗಡೆ, ಮಮತಾ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಪುಟಾಣಿಗಳು ಶ್ವೇತಾ ಭಟ್ ಅವರನ್ನು ಕೃತಜ್ಞತೆಯಿಂದ ಬೀಳ್ಕೊಟ್ಟರು.

Back to top button