Important
Trending

Missing : ಮನೆಯಿಂದ ಯುವತಿ ನಾಪತ್ತೆ: ಮಾಹಿತಿ ಸಿಕ್ಕರೆ ಪೊಲೀಸರಿಗೆ ನೀಡುವಂತೆ ಮನವಿ

ಅಂಕೋಲಾ: ಮನೆಯಿಂದ ಹೊರಗೆ ಹೋದ ಯುವತಿಯೋರ್ವಳು ಮನೆಗೆ ಮರಳಿ ಬಾರದೇ ಕಾಣೆಯಾಗಿರುವ (Missing) ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಾಣಿ ನಿವಾಸಿ ಮಾದೇವಿ ಥಾಕು ಗನಗಾ(25) ಕಾಣೆಯಾದವಳಾಗಿದ್ದು ಸೆಪ್ಟೆಂಬರ್ 11 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊರಗೆ ಹೋದವಳು ಇದುವರೆಗೆ ಮನೆಗೆ ಮರಳಿ ಬಂದಿಲ್ಲ ಎನ್ನಲಾಗುತ್ತಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 4.5 ಪೂಟ್ ಎತ್ತರದ ಸಾದಾ ಕಪ್ಪು ಮೈಬಣ್ಣ ದುಂಡನೆ ಮುಖ ಹೊಂದಿರುವ ಯುವತಿ ಕನ್ನಡ ಭಾಷೆ ಮಾತನಾಡಲು ಬಲ್ಲವಳಾಗಿದ್ದು ಮನೆಯಿಂದ ಹೊರಡುವ ಸಂದರ್ಭದಲ್ಲಿ ಕೆಂಪು ಬಣ್ಣದ ಚೂಡಿದಾರ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾಳೆ ಎಂದು ತಿಳಿಸಲಾಗಿದೆ. ಈಕೆಯ ಕುರಿತು ಮಾಹಿತಿ ಲಭ್ಯವಾದರೆ ಅಂಕೋಲಾ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್. , ವಿಲಾಸ ನಾಯಕ ನಾಯಕ ಅಂಕೋಲಾ

Back to top button