Follow Us On

Google News
Important
Trending

ಕೊಲೆ ಮಾಡಿ ಅರಣ್ಯದಲ್ಲಿ ಶವ ಎಸೆದ ಪ್ರಕರಣ: 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬನವಾಸಿ: ಕೊಲೆ ಮಾಡಿ, ಅರಣ್ಯಪ್ರದೇಶದಲ್ಲಿ ಶವವನ್ನು ಗೋಣಿಚೀಲದಲ್ಲಿ ಮುಚ್ಚಿಟ್ಟು ಹೋದ ಆರೋಪಿಗಳನ್ನು, ಪೊಲೀಸರು ಕೇವಲ 48 ಗಂಟೆಯಲ್ಲೇ ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಹಾನಗಲ್ ತಾಲೂಕಿನ ಅಶೋಕ ಉಪ್ಪಾರ್(55) ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿತ್ತು. ಆರೋಪಿಗಳ ಜಾಡು ಹಿಡಿದು ಹೋದಾಗ ಹಣದ ಆಸೆಗಾಗಿ ಅವರ ಜೊತೆಗಿದ್ದವರೆ ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೌದು, ಅಶೋಕ ಉಪ್ಪಾರ್ ಕೈ ಕೆಳಗೆ ಕೆಲಸಕ್ಕಿದ್ದ ಸುರಳೇಶ್ವರ, ನಿರಂಜನ್ ತಳವಾರ,ಗುಡ್ಡಪ್ಪ ತಿಳುವಳ್ಳಿ, ಎಂಬುವವರೆ ಅಶೋಕನಿಗೆ ಕೊಲೆಗೈದು ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ ಬಹಿರಂಗವಾಗಿದೆ. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಹಣಕ್ಕಾಗಿ ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಶಿರಸಿ ತಾಲೂಕಿನ ಕೊರ್ಲಕಟ್ಟಾ ಮಾಳಂಜಿ ರಸ್ತೆಯ ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಶವಪತ್ತೆಯಾತ್ತು. ಬೆಳಿಗ್ಗೆ ಹಾಲು ಹಾಕಲು ಹೋದ ವ್ಯಕ್ತಿ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಆರೋಪಿಗಳ ಬಂಧನಕ್ಕಾಗಿ ಮೂರು ತಂಡಗಳನ್ನ ರಚಿಸಲಾಗಿತ್ತು.

ವಿಸ್ಮಯ ನ್ಯೂಸ್, ಶಿರಸಿ

Back to top button