Follow Us On

WhatsApp Group
Important
Trending

ರೈತನ ಮೇಲೆ ಕರಡಿ ದಾಳಿ; ಪ್ರಾಣಪಾಯದಿಂದ ಪಾರು

ಕಾರವಾರ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವನ ಮೇಲೆ ಕರಡಿ ದಾಳಿಮಾಡಿ ಗಾಯಗೊಳಿಸಿರುವ ಘಟನೆ  ಜೋಯಿಡಾ ತಾಲೂಕಿನ ಬರಪಾಲಿ ಗ್ರಾಮದಲ್ಲಿ ನಡೆದಿದೆ. ಬರಪಾಲಿಯ ಸಂದೀಪ ಅಣಶಿಕರ (32) ಗಾಯಗೊಂಡ ರೈತರಾಗಿದ್ದಾರೆ. ತಮ್ಮದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿಯಾಗಿ ಎರಗಿ ಬಂದ ಕರಡಿ ಸಂದೀಪ ಅವರ ಮೇಲೆ ಹಾರಿ ದಾಳಿ ನಡೆಸಿದೆ. ಈ ವೇಳೆ ಗಾಬರಿಗೊಂಡು ಕರಡಿಯಿಂದ ತಪ್ಪಿಸಿಕೊಳ್ಳಲು ಕೂಗಾಡಿ ಸಾಕಷ್ಟು ಪ್ರಯತ್ನ ನಡೆಸಿದ್ರು, ಸಹ ಸಾಧ್ಯವಾಗಿಲ್ಲ. 

ಕೊನೆಗೆ ಹೇಗೋ ತಪ್ಪಿಸಿಕೊಂಡಿದ್ದು ಮೈ ಮೇಲೆ ಸಾಕಷ್ಟು ಗಾಯಗಳಾಗಿದೆ. ಬಳಿಲ ಸಂದೀಪ ಅವರನ್ನು ತಕ್ಷಣ ಸ್ಥಳೀಯರು ಜೋಯಿಡಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಈ ಬಗ್ಗೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Back to top button