Focus News
Trending

ಸರ್ಕಾರದ ಧೋರಣೆಗೆ ಖಂಡನೆ: ಪ್ರತಿಭಟಿಸಿದ ಕುಮಟಾ ಬ್ಲಾಕ್ ಕಾಂಗ್ರೆಸ್

ಕುಮಟಾ: ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ, ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ವಾಪಸ್ಸು ತೆಗೆದುಕೊಳ್ಳಬೇಕು, ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ತೀವ್ರ ಹಾನಿಗೆ ಪರಿಹಾರ ಒದಗಿಸಲು ವಿಫಲವಾಗಿರುವ ಕರ್ನಾಟಕ ಸರ್ಕಾರದ ನಿಲುವನ್ನು ಪ್ರತಿಭಟಿಸಿ ಮತ್ತು ಕರೊನಾ ನಿಯಂತ್ರಣ ಕಾರ್ಯಕ್ರಮದಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರದ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಮಟಾ ತಹಶೀಲ್ಧಾರರ ಕಚೇರಿಯ ಎದುರು ಪ್ರತಿಭಟನೆ ನಡೆಸಿ ತಹಸಿಲ್ದಾರರ ಮೂಲಕ ಕರ್ನಾಟಕ ರಾಜ್ಯದ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ವೇಳೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಾರದಾ ಶೆಟ್ಟಿ ಯವರು ಮಾತನಾಡಿ, ರೈತರ ಕಷ್ಟವನ್ನು ಅರಿತು ದೇವರಾಜ ಅರಸುರವರು ಮುಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿ ಊಳುವವರೆ ಓಡೆಯ ಎಂಬ ಕಾಯ್ದೆಯನ್ನು ರೈತರ ಪರವಾಗಿ ಜಾರಿಗೆ ತಂದಿದ್ದರು, ಆದರೆ ಈಗಿನ ಸರ್ಕಾರ ಬಡವರ ಜಾಗವನ್ನು ಸಹ ಉಳ್ಳವರಿಗೆ ನೀಡುವಂತಹ ಕೆಲಸ ಮಾಡುತ್ತಿದೆ. ಕರೊನಾದಂತಹ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಜೀವನ ನಡೆಸುವುದೆ ಕಷ್ಟವಾಗಿದೆ. ಹೀಗಿರುವಾಗ ಸರಕಾರ ಹೋಸದಾದ ಸುಗ್ರಿವಾಜ್ಞೆಯನ್ನು ಹೊರತಂದಿದ್ದು ಇದನ್ನು ನಾವು ಖಂಡಿಸುತ್ತೆವೆ ಎಂದರು.

ಕರೊನಾದ ವಿಷಯದಲ್ಲಿಯೂ ಈಗಿನ ಸರಕಾರ ಹಣಲೂಟಿ ಮಾಡುವ ಕೆಲಸ ಮಾಡಿದೆ. -ಶಾರದಾ ಮೋಹನ್ ಶೆಟ್ಟಿ, ಮಾಜಿ ಶಾಸಕರು

ಈ ಸಂದರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್ ನಾಯ್ಕ, ಮುಖಂಡರಾದ ಹೊನ್ನಪ್ಪನಾಯ್ಕ, ಮದುಸೂಧನ ಶೇಟ್, ಕೃಷ್ಣಾನಂದ ವೆರ್ಣೇಕರ್, ರತ್ನಾಕರ ನಾಯ್ಕ, ನಾಗೇಶ ನಾಯ್ಕ ಕಲಬಾಗ ಮುಂತಾದವರು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ. ಕುಮಟಾ.

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬಂಧ ತೋರಿಸಲಾಗುವುದು
ಎರಡನೇಯ ಸಂಬಂಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button