Focus NewsImportant
Trending
ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ: 60 ಚೀಲಗಳೊಂದಿಗಿದ್ದ 30 ಕ್ವಿಂಟಾಲ್ ಸರಕಾರದ ಅನ್ನಭಾಗ್ಯದ ಅಕ್ಕಿ ವಶಕ್ಕೆ

ದಾಂಡೇಲಿ:ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅಕ್ಕಿ ಸಮೇತ ವಶಪಡಿಸಿಕೊಂಡ ಘಟನೆ ಬರ್ಚಿ ಕ್ರಾಸ್ ಹತ್ತಿರದ ವಿಟ್ನಾಳದಲ್ಲಿ ನಡೆದಿದೆ. ಒಟ್ಟು 60 ಚೀಲಗಳೊಂದಿಗಿದ್ದ 30 ಕ್ವಿಂಟಾಲ್ ಸರಕಾರದ ಅನ್ನಭಾಗ್ಯದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ
- ಮೇ 21ರ ವರೆಗೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಯ ಮುನ್ನೆಚ್ಚರಿಕೆ
- ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ವಸತಿ ಸೌಲಭ್ಯ, ಆಕರ್ಷಕ ಸಂಬಳ

ತಾಲೂಕಿನ ಗಾಂವಠಾಣ ನಿವಾಸಿ ಮಹಮ್ಮದ್ ಜಮೀಲ್ ಮತ್ತು ಮಾರುತಿನಗರದ ಸಲೀಂ ಮಹಮ್ಮದ್ ಅಲಿ ವಾಹನದಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ದಾಳಿ ನಡೆಸಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ದಾಂಡೇಲಿ ಕಡೆಯಿಂದ ಬೆಳಗಾವಿ ಕಡೆಗೆ ಅಕ್ಕಿಯನ್ನು ಸಾಗಾಟ ಮಾಡಲಾಗುತ್ತಿತ್ತು. 30 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡು ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ-1995ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ
