Focus NewsImportant
Trending
ಗೋಕರ್ಣದ ಮಖ್ಯ ಕಡಲತೀರದಲ್ಲಿ ಚಿನ್ನದ ಮೂಗುತಿ ಇರುವ ದುರ್ಗಾದೇವಿ ಮೂರ್ತಿ ಪತ್ತೆ: ಸಾರ್ವಜನಿಕರಲ್ಲಿ ಕುತೂಹಲ

ಗೋಕರ್ಣ: ಇಲ್ಲಿನ ಮಖ್ಯ ಕಡಲ ತೀರದಲ್ಲಿ ದುರ್ಗಾದೇವಿ ಮೂರ್ತಿಯೊಂದು ದೊರೆತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪ್ರವಾಸಿಗರು ನೀರಿನಲ್ಲಿ ಆಟವಾಡುವ ವೇಳೆ ಈ ಮೂರ್ತಿ ಕಾಲಿಗೆ ತಾಗಿದ್ದು, ತಕ್ಷಣ ಅದನ್ನು ದಡಕ್ಕೆ ತಂದಿದ್ದಾರೆ. ಈ ಮೂರ್ತಿಯ ಮೂಗಿಗೆ ಚಿನ್ನದ ಮೂಗುತಿ ಇದ್ದ, ಬಹು ಆಕರ್ಷಿತವಾದ ದೇವಿಯ ಮೂರ್ತಿಯನ್ನು ನೋಡಲು ಪ್ರವಾಸಿಗರು ಹಾಗೂ ಸ್ಥಳೀಯರು ಮುಗಿಬಿದ್ದು, ಪೋಟೋ ತೆಗೆಯುತ್ತಾ ಕುತೂಹಲದಿಂದ ನೋಡುತ್ತಿರುವ ದೃಷ್ಯ ಕಂಡುಬoತು.
- ಹೆಂಡತಿಗೆ ಊಟ ತಯಾರಿ ಮಾಡಲು ಹೇಳಿ ಕುಳಿತಲ್ಲಿಯೇ ಮೃತಪಟ್ಟ ಪಶು ಚಿಕಿತ್ಸಾಲಯದ ನೌಕರ
- ಬೃಹತ್ ಶೋರೂಮ್ ಬ್ರೌನ್ವುಡ್ ನಲ್ಲಿ 12 ಉದ್ಯೋಗಾವಕಾಶಗಳು: ಇಂದೇ ಸಂಪರ್ಕಿಸಿ
- ವಿದ್ಯಾರ್ಥಿಗಳಿಗೆ ಭಗವದ್ಗೀತೆ ನೀಡಿ ಭವಿಷ್ಯಕ್ಕೆ ಶುಭ ಕೋರಿದ ಪ್ರಮುಖ ಸೌಹಾರ್ದ ಸಹಕಾರಿ

ಯಾರೋ ಸಮುದ್ರದಲ್ಲಿ ವಿರ್ಸಜಿಸಿ ಹೋಗಿದ್ದು ಅದೇ ವಾಪಾಸ್ಸು ಬಂದಿದೆ ಎನ್ನಲಾಗುತ್ತಿದೆ. ಮೂರ್ತಿ ಭಿನ್ನವಾದಾಗ ನೂತನ ಮೂರ್ತಿಯನ್ನು ಪ್ರತಿಷ್ಠಾಪಿಸುವ ವೇಳೆ ಹಳೆಯದನ್ನು ಸಮುದ್ರದಲ್ಲಿ ವಿಸರ್ಜಿಸುವುದು ವಾಡಿಕೆಯಾಗಿದೆ. ಪಿ.ಐ ವಸಂತ ಆಚಾರಿ ಮತ್ತು ಪಿ.ಸ್.ಐ ಸುಧಾ ಅಘನಾಶಿನಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಸ್ಮಯ ನ್ಯೂಸ್, ಗೋಕರ್ಣ
