
ಯಲ್ಲಾಪುರ: ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿoದ ಮನೆಯ ಪಕ್ಕದಲ್ಲಿರುವ ವಿದ್ಯುತ್ ಕಂಬದ ಸರ್ವಿಸ್ ಲೈನ್ ಸರಿಪಡಿಸಲು ಹೋದಾಗ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಮನೆ ಎಂಬಲ್ಲಿ ಈ ದುರ್ಘಟನೆ ನಡೆದಿದೆ.
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ

ಹೌದು, ವಿದ್ಯುತ್ ಸರ್ವಿಸ್ ಲೈನ್ ಸರಿಪಡಿಸಲು ಹೋಗಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ. ಪಟ್ಟಣ ವ್ಯಾಪ್ತಿಯ ಸಬಗೇರಿಯ ಆದಂಸಾಬ್ ಇ. ಶೇಖ್ (75) ಮೃತಪಟ್ಟ ವ್ಯಕ್ತಿ. ಉಮ್ಮಚಗಿಯ ಹುಣಸೇಮನೆಯಲ್ಲಿ ಅತಿಕ್ರಮಣ ಜಮೀನಿನಲ್ಲಿರುವ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ಸರಿಪಡಿಸಲು ಹೋದಾಗ ದುರ್ಘಟನೆ ನಡೆದಿದೆ.
ವಿಸ್ಮಯ ನ್ಯೂಸ್, ಕಾರವಾರ
