Focus NewsImportant
Trending
ನಕಲಿ ದಾಖಲೆ ಸೃಷ್ಟಿಸಿ ಕದಂಬ ನೌಕಾನೆಲೆ ಒಳಗೆ ತೆರಳಲು ಯತ್ನ : ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ ಯುವಕ

ಕಾರವಾರ: ನಕಲಿ ದಾಖಲೆ ಸೃಷ್ಟಿಸಿ ಅದನ್ನು ಬಳಸಿಕೊಂಡು ಕದಂಬ ನೌಕಾನೆಲೆ ಒಳಗೆ ತೆರಳಲು ಯತ್ನಿಸಿದ ಯುವಕ ಇದೀಗ ನೌಕಾದಳದ ಪೊಲೀಸರ ಅತಿಥಿಯಾಗಿದ್ದಾನೆ. ತನ್ನ ಗುರುತಿನ ಚೀಟಿ ಮತ್ತು ಅದಕ್ಕೊಂದು ಸಂಖ್ಯೆಯನ್ನೂ ಸಿದ್ಧಪಡಿಸಿಕೊಂಡಿದದ್ದು, ಇದನ್ನು ಬಳಸಿಕೊಂಡು ನೌಕಾ ನೆಲೆಯ ಮುಖ್ಯ ಗೇಟ್ ಬಳಿ ತೆರಳುವಾಗ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ.
- ಅಕ್ಕನ ಅಂತಿಮ ಕಾರ್ಯ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ತಮ್ಮನ ದುರ್ಮರಣ: ಏನಾಯ್ತು ನೋಡಿ?
- ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯಿಂದ ಮಹತ್ವದ ಹೇಳಿಕೆ : ಮೀನುಗಾರಿಕಾ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದಾಗಿ ಬಂದು ಅಹವಾಲು ಆಲಿಸಲು ಆಗ್ರಹ

ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಕಿರಣ್ ಎಸ್.ಆರ್. ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ನೌಕಾಪಡೆಯ ಪ್ರೊಬೆಷನರಿ ಸಬ್ ಲೆಫ್ಟಿನೆಂಟ್ ಆಫೀಸರ್ ಎಂದು ಪರಿಚಯಿಸಿಕೊಂಡಿದ್ದ ಈತ, ಮಾನವ ಸಂಪನ್ಮೂಲ ಮತ್ತು ಯೋಜನಾ ನಿರ್ದೇಶನಾಲಯದಿಂದ 2021ರ ಡಿಸೆಂಬರ್ 14 ರಂದು ತನ್ನ ನೇಮಕಾತಿಯಾಗಿದೆ ಎಂದು ಹೇಳಿದ್ದ. ಈತ ನೀಡಿದ ದಾಖಲೆಯನ್ನು ವಿವರವಾಗಿ ಪರಿಶೀಲಿಸಿದಾಗ ಅವೆಲ್ಲವೂ ನಕಲಿ ಎಂಬುದು ದೃಢಪಟ್ಟಿದೆ. ಯುವಕ ಯಾಕೆ ಕದಂಬ ನೌಕಾನೆಲೆಗೆ ತೆರಳಲು ಯತ್ನಿಸಿದ್ದ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ವಿಸ್ಮಯ ನ್ಯೂಸ್, ಕಾರವಾರ
