
ಕುಮಟಾ: ತಾಲೂಕಿನ ಯಾಣದ ಕುಡ್ಲಗದ್ದೆ ಅತ್ತಿಬೆಟ್ಟು ಸಮೀಪದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಇದೆಂದು ಶಂಕಿಸಲಾಗಿದೆ.
- ಗೋವಿಂದಮೂರ್ತಿ ದೇವರ ವರ್ಧಂತಿ: ಗಮನಸೆಳೆದ “ಶ್ರೀನಿವಾಸ ಕಲ್ಯಾಣ” ಪೌರಾಣಿಕ ನಾಟಕ
- ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ನಾಗರಹಾವು : ಕುಟುಂಬಸ್ಥರು, ಅಕ್ಕಪಕ್ಕದ ಮನೆಯವರಲ್ಲಿ ಆತಂಕ

ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಕಳೆದ ಸುಮಾರು 10 ದಿನಗಳ ಹಿಂದೆ ಕುಮಟಾ ತಾಲೂಕಿನ ಯಾಣದ ಅತ್ತಿಬೆಟ್ಟು ಗ್ರಾಮದ ಕುಡ್ಲಗದ್ದೆ ಅರಣ್ಯ ಪ್ರದೇಶದಲ್ಲಿ ಮರಕ್ಕೆ ಬೆಡ್ಶೀಟ್ ನಮೂನೆಯ ಬಟ್ಟೆಯನ್ನು ಕಟ್ಟಿ, ಇನ್ನೊಂದು ತುದಿಯಿಂದ ಕುತ್ತಿಗೆಗೆ ಉರುಳು ಹಾಕಿಕೊಂಡು ಮೃತಪಟ್ಟಿದ್ದು, ಈ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಕುರಿತಾಗಿ ಯಾವುದೇ ಮಾಹಿತಿ ತಿಳಿದಿಲ್ಲವಾಗಿದ್ದು, ಪೊಲೀಸ್ ತನಿಖೆ ಮುಂದುವರೆದಿದೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ
