Important
Trending

ಕಾಲೇಜಿನ ಬೀಗ ಒಡೆದು ಪ್ರಾಂಶುಪಾಲರ ಲಾಕರ್‌ನಲ್ಲಿದ್ದ 2 ಲಕ್ಷ ಕಳ್ಳತನ

ಕುಮಟಾ: ಕಾಲೇಜಿನ ಪ್ರಾಂಶುಪಾಲರ ಕೊಠಡಿಯ ಬೀಗ ಒಡೆದು, ಲಾಕರ್ ಮುರಿದು ಬರೋಬ್ಬರಿ 2 ಲಕ್ಷ 16 ಸಾವಿರ ಕಳ್ಳತನ ಮಾಡಿದ ಘಟನೆ ತಾಲೂಕಿನ ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ. ತಡರಾತ್ರಿ ಈ ಕಳ್ಳತನ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ಬೆರಳಚ್ಚು ತಜ್ಞರು ಆಗಮಿಸಿದ್ದು ಪರೀಶೀಲನೆ ನಡೆಸಿದ್ದಾರೆ. ಕುಮಟಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜಿನ ಪ್ರವೇಶದ್ವಾರದ ಬೀಗ ಹಾಕಿಯೇ ಇದ್ದು, ಕಳ್ಳರು ಹೇಗೆ ಒಳಬಂದರು ಎಂಬ ಅನುಮಾನ ಕಾಡುತ್ತಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Back to top button