ಹೆಂಡತಿ , ಮಗನನ್ನ ಕೊಂದು ತಾನೂ ಸಾವಿಗೆ ಶರಣಾದ ವ್ಯಕ್ತಿ – ಅಪ್ಪನಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡ ಇನ್ನೊಬ್ಬ ಮಗ

ಕುಮಟಾ: ವ್ಯಕ್ತಿಯೊಬ್ಬ ಹೆಂಡತಿ ಮತ್ತು ಮಗನನ್ನು ಕೊಂದು ತಾನೂ ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ತಾಲೂಕಿನ ಸಂತೇಗುಳಿ ಬಂಗಣೆಯಲ್ಲಿ ನಡೆದಿದೆ. ರಾಮಾ ಮರಾಠಿ ಎಂಬಾತನು ತನ್ನ ಹೆಂಡತಿ ತಾಕಿ (35) ಹಾಗು ಮಗ ಲಕ್ಷ್ಮಣ (12) ಇಬ್ಬರನ್ನು ಕೊಂದು ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
- ಸಾನ್ವಿ ಸ್ಕಿನ್ ಮತ್ತು ಲೇಸರ್ ಸೆಂಟರ್ ನಲ್ಲಿ ಉಚಿತ ಪಿಸಿಯೋಥೆರಪಿ ಶಿಬಿರ
- ಮೇ 21ರ ವರೆಗೆ ರೆಡ್ ಅಲರ್ಟ್ ಘೋಷಣೆ: ಭಾರೀ ಮಳೆಯ ಮುನ್ನೆಚ್ಚರಿಕೆ
- ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ವಸತಿ ಸೌಲಭ್ಯ, ಆಕರ್ಷಕ ಸಂಬಳ
ರಾಮ ಮರಾಠಿಯು ಅತಿಯಾದ ಕುಡಿತದ ಚಟಕ್ಕೆ ಬಿದ್ದಿದ್ದ ಎನ್ನಲಾಗಿದ್ದು, ಮಾನಸಿಕವಾಗಿಯೂ ಕೂಡ ಅಸ್ವಸ್ಥಗೊಂಡಿದ್ದ ಎನ್ನಲಾಗಿದೆ. ಗುರುವಾರ ತಡರಾತ್ರಿ ಕುಡಿದ ಅಮಲಿನಲ್ಲಿದ್ದ ರಾಮ ಮರಾಠಿ ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನು ಕತ್ತಿಯಿಂದ ಕೊಲೆ ಮಾಡಿದ್ದಾನೆ. ಈ ಒಂದು ದೃಶ್ಯವನ್ನು ತನ್ನಿಬ್ಬರು ಮಕ್ಕಳು ಗಮನಿಸಿದ ಹಿನ್ನಲೆಯಲ್ಲಿ ಇಬ್ಬರನ್ನೂ ಕೂಡ ಅಟ್ಟಾಡಿಸಿಕೊಂಡು ಬೆನ್ನತ್ತಿ ಹೋಗಿದ್ದು, ಇಬ್ಬರು ಗಂಡು ಮಕ್ಕಳ ಪೈಕಿ ಓರ್ವನು ತಂದೆಯಿoದ ತಪ್ಪಿಸಿಕೊಂಡಿದ್ದಾನೆ.
ಕೈಗೆ ಸಿಕ್ಕ ಮಗನಾದ 12 ವರ್ಷದ ಲಕ್ಷ್ಮಣ ಮರಾಠಿಯನ್ನು ಕೊಲೆಗೈದಿದ್ದು, ನಂತರ ತಾನೂ ಸಹ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನೆಯ ವಿವರ: ಗಲಾಟೆ ವೇಳೆ ಹಿರಿಯ ಮಗ 14 ವರ್ಷದ ಭಾಸ್ಕರ ಮರಾಠಿ ಮನೆಯಲ್ಲೇ ಇದ್ದ. ತಂದೆ, ತಾಯಿಯ ಮೇಲೆ ಹಲ್ಲೆ ಮಾಡುತ್ತಿರುವುದನ್ನು ನೋಡಿ ಮಲಗಿದ್ದ ತಮ್ಮನ್ನ ಎಬ್ಬಿಸಿ ಓಡಿ ಹೋಗುವಂತೆ ತಿಳಿಸಿದ್ದ ಎನ್ನಲಾಗುತ್ತಿದೆ. ಭಯ ಭೀತನಾದ 12 ವರ್ಷ ಲಕ್ಷ್ಮಣ ಮಾರಾಠಿ ಮನೆಯಿಂದ ಓಡಿ ಹೋಗುತ್ತಿರುವಾಗ ಅವನನ್ನ ಅಟ್ಟಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ.
ಹಿರಿಯ ಮಗ ಹೇಗೋ ತಪ್ಪಿಸಿಕೊಂಡಿದ್ದಾನೆ. ಬಳಿಕ ಎರಡು ಕೊಲೆಗಳನ್ನ ಮಾಡಿದ ರಾಮಾ ಮರಾಠಿ ಮನೆಗೆ ಬಂದು ನೇಣಿಗೆ ಶರಣಾಗಿದ್ದಾನೆ.ಸ್ಥಳಕ್ಕೆ ಕುಮಟಾ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಸ್ಮಯ ನ್ಯೂಸ್, ಕುಮಟಾ