Focus News
Trending

ಸಂಘದ ಮನೆಯೊಡತಿ ವಿಜಯಲಕ್ಷ್ಮಿ ಪೈ ನಿಧನ

ಅಂಕೋಲಾ : ಇಲ್ಲಿಯ ಕಾಕರಮಠದ ಆರೆಸ್ಸೆಸ್ ಕುಟುಂಬದ ಹಿರಿಯರೂ, ನಿವೃತ್ತ ಅಂಚೆ ಅಧಿಕಾರಿ ವಿಜಯಲಕ್ಷ್ಮಿ ರಾಮಕೃಷ್ಣ ಪೈ (79) ಸೋಮವಾರ ಬೆಳಿಗ್ಗೆ ನಿಧನರಾದರು. ಇವರು ಇಲ್ಲಿಯ ಕೆನರಾ ಬುಕ್ ಸ್ಟಾಲ್ ಮಾಲಕರೂ, ಕೆನರಾ ವೆಲಫೇರ್ ಟ್ರಸ್ಟ್ ನ ನಿವೃತ್ತ ಅಧಿಕಾರಿ ಆಗಿದ್ದ ದಿ. ರಾಮಕೃಷ್ಣ ಪೈ ಅವರ ಪತ್ನಿ. ಇವರ ಮನೆಯೇ ಸಂಘದ ಮನೆಯಾಗಿದ್ದು, ವಿಜಯಲಕ್ಷ್ಮಿ ಅವರು ಸಂಘದ ಪ್ರಮುಖರು ಮತ್ತು ಕಾರ್ಯಕರ್ತರಿಗೆ ಸದಾ ನಗುಮೊಗದಿಂದ ಆತಿಥ್ಯ ನೀಡಿ ಮನ ಗೆದ್ದಿದ್ದರು. ಪತಿ ದಿ. ರಾಮಕೃಷ್ಣ ಪೈ ಅವರು ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿದ್ದರಲ್ಲದೇ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲು ಶಿಕ್ಷೆಗೂ ಒಳಗಾಗಿದ್ದರು. ಇಬ್ಬರು ಪುತ್ರರು, ಅಪಾರ ಬಂಧುಬಳಗವನ್ನಗಲಿದ್ದಾರೆ. ಮೃತರ ಮನೆಗೆ ಆರೆಸ್ಸೆಸ್ , ವಿಹಿಂಪ, ಬಿಜೆಪಿ ಮತ್ತಿತರ ಸಂಘಟನೆಯ ಪ್ರಮುಖರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button