Follow Us On

Google News
Important
Trending

ಸಾಲಬಾಧೆ ತಾಳಲಾರದೆ ಡ್ಯಾಮಿಗೆ ಹಾರಿ ಸಾವಿಗೆ ಶರಣಾದ ಪಿಗ್ನಿ ಎಜೆಂಟ್

ಭಟ್ಕಳ: ಸಾಲಬಾಧೆಯನ್ನು ಮನಸ್ಸಿಗೆ ಹಚ್ಚಿಕೊಂಡ ವ್ಯಕ್ತಿಯೋರ್ವ ತಾಲೂಕಿನ ಕಡವಿನಕಟ್ಟಾ ಡ್ಯಾಮ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ಮೂಡ ಶಿರಾಲಿ ನಿವಾಸಿ ವಾಸು ನಾಯ್ಕ ಎಂದು ತಿಳಿದು ಬಂದಿದೆ. ಈತ ಜಾಲಿ ಗ್ರಾಮೀಣ ವಿಕಾಸ ಬ್ಯಾಂಕಿನಲ್ಲಿ ಪಿಗ್ನಿ ಎಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದು, ಅದೇ ಬ್ಯಾಂಕಿನಲ್ಲಿ ಸುಮಾರು 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೇ ಮನಸ್ಸಿಗೆ ಹಚ್ಚಿಕೊಂಡಿದ್ದ ಎನ್ನಲಾಗಿದೆ.

ಶುಕ್ರವಾರ ಕುಟುಂಬಸ್ಥರು ಈತನನ್ನು ಸಾಕಷ್ಟು ಬಾರಿ ಹುಡುಕಿದ್ದಾರೆ. ದೇವಸ್ಥಾನಕ್ಕೆ ಬಂದ ಪರಿಚಯಸ್ಥರು ದೇವಸ್ಥಾನ ಪಕ್ಕದಲ್ಲಿ ನಿಲ್ಲಿಸಿಟ್ಟ ಈತನ ಬೈಕ್‌ನ್ನು ನೋಡಿ ಅನುಮಾನಗೊಂಡು ಕುಟುಂಬಸ್ಥರಿಗೆ ಸುದ್ದಿ ತಿಳಿಸಿದ್ದು, ಕುಟುಂಬದವರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದಾರೆ. ನಂತರ ಕಡವಿನಕಟ್ಟಾ ಡ್ಯಾಮ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button