Important
Trending

ಪ್ರತಿವರ್ಷ ಇಲ್ಲಿ 250ಕ್ಕೂ ಹೆಚ್ಚು ಪರಿಸರ ಸ್ನೇಹಿ ಗಣೇಶಮೂರ್ತಿ ತಯಾರು: 150 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡಿದೆ ಬಂದಿದೆ ಕಲಾಸೇವೆ

ಹೊನ್ನಾವರ: ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಚೌತಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ, ಹೀಗಾಗಿ ಮಣ್ಣಿನ ಮೂರ್ತಿ ತಯಾರಿಕಾ ಕಲಾವಿದರು, ನಾವು ನಿರ್ಮಿಸಿದ ವಿಧ ವಿಧವಾದ ಗಣಪನಿಗೆ ಅಂತಿಮ ಸ್ಪರ್ಶ ನೀಡಿ ದೃಷ್ಟಿ ಬರೆಯುತ್ತಿದ್ದಾರೆ. ಬಣ್ಣದ ಕಲಾವಿದರು ಹಗಲು ರಾತ್ರಿ ಎನ್ನದೇ ಗಣಪನಿಗೆ ಚಿತ್ತಾಕರ್ಷಕವಾದ ಬಣ್ಣ ನೀಡಿ ಜೀವಕಳೆ ತುಂಬುತ್ತಿದ್ದಾರೆ, ಸಾಮಾನ್ಯವಾಗಿ ಗಣಪತಿ ಯನ್ನು ಮಾಡುವ ಕಲಾವಿದರು,. ಪ್ರತಿವರ್ಷ ಕೆಲವು ವಿಶೇಷ ಗಣಪನನ್ನು ಸಿದ್ಧಪಡಿಸುತ್ತಾರೆ.

ಇಲ್ಲಿ ಪ್ರತಿವರ್ಷ 250 ಕ್ಕೂ ಹೆಚ್ಚು ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಾಗುತ್ತದೆ. ಇವರು ಮೂರ್ತಿ ತಯಾರಿಕೆಗೆ ಹೊನ್ನಾವರದ ಜೇಡಿಮಣ್ಣು ಬಳಸುವುದು ವಿಶೇಷ., ಯಕ್ಷಗಾನ ಶೈಲಿಯ ಗಣಪ, ನಾಟ್ಯ ಗಣಪ, ಸಿಂಹಾಸನ ಗಣಪ, ಹೀಗೆ ಎಲ್ಲಾ ವೇಷಭೂಷಣಗಳನ್ನು ತುಂಬ ನೈಜ ಎಂಬ ರೀತಿಯಲ್ಲಿ ಮಾಡಲಾಗತ್ತದೆ.,

ಹೊನ್ನಾವರ-ಕುಮಟಾ-ಭಟ್ಕಳ ಭಾಗದವರು ಪ್ರತಿ ವರ್ಷವು ಇಲ್ಲಿನ ಮೂರ್ತಿಯನ್ನು ಕೊಂಡೊಯ್ಯುತ್ತಾರೆ. ಹಳದಿಪುರ, ಕರ್ಕಿ, ಮುಗ್ವಾ, ಹೊಸಾಕುಳಿ, ಕಾಸರಕೋಡ, ಬಳ್ಕೂರ, ಸೇರಿದಂತೆ ತಾಲೂಕಿನ ಮೂಲೆ ಮೂಲೆಗಳ ಮನೆಗಳಲ್ಲಿ ಇಲ್ಲಿನ ಪೂಜಿಸಲ್ಪಡುತ್ತದೆ. ಹೌದು, ಹೊನ್ನಾವರ ಪಟ್ಟಣದ ಕಸಬಾಗುಂಡಿಬೈಲನ ತೋಟ್ಟಲರಾಮ ಮನೆತನದವರು 150 ವರ್ಷದ ಹಿಂದಿನಿoದಲೂ ಗಣಪತಿ ಮೂರ್ತಿ ತಯಾರಿಕೆಯಲ್ಲಿ ಸಿದ್ಧ ಹಸ್ತರು. ಮೊದಲು ರಾಮ ಬಂಡಾರಿಯವರು ಗಣಪತಿ ಮೂರ್ತಿಯನ್ನು ತಯಾರಿಸುತ್ತಾ ಬಂದಿದ್ದು, ಅವರ ನಂತರ ಮಗ ನಾಗಪ್ಪ ಭಂಡಾರಿಯವರು ನಿರ್ಮಿಸುತ್ತಿದ್ದರು.

ಪರಿಸರ ಸ್ನೇಹಿ ಗಣೇಶಮೂರ್ತಿ

ಈಗ ಅವರ ಮೂರು ಮಕ್ಕಳಾದ ದೀಪಕ ಭಂಡಾರಿ, ರೋಷನ್ ಭಂಡಾರಿಯವರು ಮತ್ತು ಜ್ಞಾನೇಶ್ವರ ಭಂಡಾರಿಯವರು ಗಣಪತಿ ಮೂರ್ತಿ ತಯಾರಿಕೆಯಲ್ಲಿ ಸಿದ್ದಹಸ್ತರು. ಇದೀಗ ದೀಪಕ ಭಂಡಾರಿಯವರ ಮಗ ಅಕ್ಷಯ ಭಂಡಾರಿ ಮತ್ತು ರೋಷನ್ ಭಂಡಾರಿಯವರ ಮಗ ವಿನಾಯಕ ಭಂಡಾರಿ ಸಹಾಯದಿಂದ ಮೂರ್ತಿ ತಯಾರಿಕೆ ಕಾರ್ಯ ಮುಂದುವರಿದಿದೆ, ಅಲ್ಲದೆ ಇವರಿಗೆ ತಾಲೂಕಿನ ಕೂಡ್ಲದ ವಿನೋದ ಮಡಿವಾಳ ಸಹಾಯ ಮಾಡುತ್ತಿದ್ದಾರೆ, ಈ ಸಂದರ್ಭದಲ್ಲಿ ಮೂರ್ತಿ ತಯಾರಕರಾದ ದೀಪಕ ಭಂಡಾರಿ ಮಾತನಾಡಿ, ತಮ್ಮ ಅನಿಸಿಕೆ ಹಂಚಿಕೊAಡರು.

ನoತರ ಮೂರ್ತಿ ತಯಾರಕರಾದ ವಿನಾಯಕ ಭಂಡಾರಿ ಮಾತನಾಡಿ ಈ ವರ್ಷ ಎರಡುದಿನ ಚೌತಿ ಬಂದಿರುವುದರಿoದ ನಮ್ಮ ಕೆಲಸ ಬೇಗ ನಡೆಯುತ್ತಿದೆ, ಪ್ರತಿ ವರ್ಷದಂತೆ ಈ ವರ್ಷವು 250 ಕ್ಕೂ ಹೆಚ್ಚು ಗಣಪತಿ ತಯಾರಿಸಿದ್ದೇವೆ ಎಂದು ಹೇಳಿದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.

Back to top button