Focus News
Trending

ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಸರಳ ” ಹಿಂದಿ ಭಾಷಾದಿವಸ್ ” ಆಚರಣೆ

ಹೊನ್ನಾವರ: ಸ್ಥಳೀಯ ನ್ಯೂಇಂಗ್ಲಿಷ್ ಸ್ಕೂಲ್ ಹೊನ್ನಾವರ, ಕನ್ನಡ ಮಾಧ್ಯಮ ಹೈಸ್ಕೂಲ್ ನಲ್ಲಿಹಿಂದಿ ಭಾಷಾ ಸಂಘ, ಸ್ಕೌಟ್&ಗೈಡ್ಸ್ ವತಿಯಿಂದ ಅತ್ಯಂತ ಸುಂದರ, ಸರಳ, ಮತ್ತುಎಲ್ಲಾ ಭಾಷೆಗಳ ಸ್ನೇಹಿತನಂತಿರುವ” ಹಿಂದಿ ಭಾಷಾ ದಿವಸ್” ವನ್ನು ತಾಯಿ ಭಾರತಾಂಬೆಯ ಅಡಿದಾವರೆಯಲ್ಲಿ ಭಾರತದ ನಕಾಶೆಯನ್ನು ಪುಷ್ಪದಲ್ಲಿ ರಚಿಸಿ, ಸುತ್ತಲೂ ದೀಪ ಬೆಳಗಿಸಿ ಸರಳ, ಸುಂದರವಾಗಿ ವಿಶಿಷ್ಟವಾಗಿ ಆಚರಿಸಲಾಯಿತು.

ನವಿಲನ್ನೇ ನುಂಗಿದ ಬೃಹತ್ ಹೆಬ್ಬಾವು : ಜೀರ್ಣಿಸಿಕೊಳ್ಳಲಾಗದೆ ಹಾವಿನ ಪರದಾಟ : ಅಪರೂಪದ ದೃಶ್ಯ ಕಂಡು ಬೆರಗಾದ ಜನರು

ವಿದ್ಯಾರ್ಥಿಗಳು ಹಿಂದಿಯ ಕೆಲವು ಘೋಷಣೆಗಳನ್ನು ಮೊಳಗಿದರು. ಶಾಲಾ ಮುಖ್ಯಾಧ್ಯಾಪಕರಾದಜಯಂತ ನಾಯಕರವರು ಹಿಂದಿ ಭಾಷೆಯ ಮಹತ್ವವನ್ನು ತಿಳಿಸಿದರು.ಈ ಸಂದoರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಅಶೋಕ ನಾಯ್ಕ, ಯಶ್ವಂತ ಮೇಸ್ತ, ಸೂರಜ್. ಸಿ. ಎ. ಶಂಕರಹೆಗಡೆ. ಆಶಾ ಖಾರ್ವಿ, ಸೌಮ್ಯಾ ನಾಯ್ಕ. ಹಾಗೂ ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕಿರೋಜಿ ಮೇಡಮ್, ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಈ ಸಂಪೂರ್ಣಕಾರ್ಯಕ್ರಮವನ್ನು ಶಾಲೆಯ ಹಿಂದಿ ಶಿಕ್ಷಕರಾದ ರಾಘವೇಂದ್ರ ಹೆಗಡೆ ಸಂಘಟಿಸಿದ್ದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button