ನವಿಲನ್ನೇ ನುಂಗಿದ ಬೃಹತ್ ಹೆಬ್ಬಾವು : ಜೀರ್ಣಿಸಿಕೊಳ್ಳಲಾಗದೆ ಹಾವಿನ ಪರದಾಟ : ಅಪರೂಪದ ದೃಶ್ಯ ಕಂಡು ಬೆರಗಾದ ಜನರು

ಅಂಕೋಲಾ: ಆಹಾರ ಸರಪಣಿಯಲ್ಲಿ ಪ್ರಾಣಿ- ಪಕ್ಷಿ -ಸರೀಸೃಪಗಳು ಬೇರೆ ಬೇರೆ ಆಹಾರ ಇಲ್ಲವೇ ಒಂದನ್ನೊoದು ತಿಂದು ಬದುಕುವುದು ಸಾಮಾನ್ಯ. ಆದರೆ ಇಲ್ಲೊಂದು ಬಲು ಅಪರೂಪದ ಘಟನೆ ಎಂಬoತೆ ಭಾರೀ ಗಾತ್ರದ ಹೆಬ್ಬಾವೊಂದು ತಾನು ನುಂಗಿದ್ದ ಆಹಾರನ್ನು ಹೊರ ಕಕ್ಕಿದಾಗ ಅದು ನವಿಲೆಂದು ಗೊತ್ತಾಗಿ ಅದನ್ನು ನೋಡಿದ ಸ್ಥಳೀಯರು ಆಶ್ಚರ್ಯ ಪಡುವಂತಾಗಿತ್ತು.

ಮಕ್ಕಳ ಕಳ್ಳರು ಬಂದಿರುವುದು ನಿಜನಾ? ಅಸಲಿ ಸುದ್ದಿ ಏನು? ತುರ್ತು ಸಂದರ್ಭಗಳಲ್ಲಿ 112 ಕ್ಕೆ ಕರೆ ಮಾಡಿ

ಅಂಕೋಲಾ ಕುಮಟಾ ಮಾರ್ಗ ಮಧ್ಯೆ ಸಿಗುವ ಜಮಗೋಡ ರೈಲ್ವೆ ನಿಲ್ದಾಣದ ಕ್ರಾಸನಿಂದ ಸ್ವಲ್ಪ ಮುಂದೆ ಮುಖ್ಯ ರಸ್ತೆಗೆ ಹೊಂದಿಕೊoಡಿರುವ ಕಮಲಾಕರ ತೊರ್ಕೆ ಕುಟುಂಬದ ಖಾಸಗಿ ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಕಂಡು ಬಂದಿದ್ದು ಉರಗ ರಕ್ಷಕ ಮಹೇಶ ನಾಯ್ಕ ಅವರು ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಆಶ್ಚರ್ಯವೆಂದರೆ ಹೆಬ್ಬಾವನ್ನು ಹಿಡಿದ ಸಂದರ್ಭದಲ್ಲಿ ಹಾವು ತಾನು ನುಂಗಿದ್ದ ನವಿಲನ್ಧು ಹೊಟ್ಟೆಯಿಂದ ಹೊರ ಹಾಕಿದೆ.

ತೊರ್ಕೆ ಕುಟುಂಬದ ಜಮೀನಿನಲ್ಲಿ ಕೂಲಿಯಾಳುಗಳು ಗಿಡ ಗಂಟಿಗಳನ್ನು ಸ್ವಚ್ಛಗೊಳಿಸಿ, ಕಟಾವು ಮಾಡಲಾಗಿದ್ದ ಕಟ್ಟಿಗೆಗಳನ್ನು ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಪಕ್ಕದಲ್ಲೇ ದೊಡ್ದ ಹೆಬ್ಬಾವೊಂದು ಇರುವುವನ್ನು ಗಮನಿಸಿ ಕ್ಷಣಕಾಲ ಅವಕ್ಕಾಗಿದ್ದಾರೆ. ನಂತರ ವಕೀಲರಾದ ಬೀರಣ್ಣ ಟಿ ನಾಯಕ ಇವರ ಮೂಲಕ ಉರಗ ಸಂರಕ್ಷಕ ಅವರ್ಸಾದ ಮಹೇಶ ನಾಯ್ಕ ಅವರನ್ನು ಸಂಪರ್ಕಿಸಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ ಸ್ಥಳೀಯರ ಸಹಕಾರದಲ್ಲಿ ಹೆಬ್ಬಾವನ್ನು ಹಿಡಿವ ಕಾರ್ಯಾಚರಣೆ ಕೈಗೊಂಡಾಗ ಹೆಬ್ಬಾವು ತನ್ನ ಹೊಟ್ಟೆಯಲ್ಲಿ ದೊಡ್ಡ ಗಾತ್ರದ ಆಹಾರ ನುಂಗಿರುವುದು ಗಮನಕ್ಕೆ ಬಂದು ಜನರ ಕುತೂಹಲಕ್ಕೆ ಕಾರಣವಾಗಿತ್ತು.

ತಾನು ನುಂಗಿದ್ದ ಆಹಾರ ಜೀರ್ಣಿಸಿಕೊಳ್ಳುವಷ್ಟರಲ್ಲಿ ತಾನು ಮನುಷ್ಯರ ಕಣ್ಣಿಗೆ ಬಿದ್ದೆ , ಇನ್ನು ನನಗೆ ಇಲ್ಲೇ ಇದ್ದರೆ ತೊಂದರೆ ಆದೀತು ಎಂಬoತೆ ಜಾಗೃತವಾದ ಹೆಬ್ಬಾವು ತಾನು ನುಂಗಿದ ಆಹಾರವನ್ನು ಉಗುಳಲು ಮುಂದಾಗಿದೆ. ಈ ವೇಳೆ ತನ್ನ ದೇಹವನ್ನು ಬಳಕಿಸುತ್ತಾಆಹಾರ ಹೊರ ಹಾಕಲು ಬಾಯ್ತೆರೆದಿದೆ. ಈ ವೇಳೆ ಹಾವಿನ ಬಾಯಿಂದ ನವಿಲಿನ ಭಾಗ ಹೊರ ಬರುತ್ತಿರುವುದನ್ನು ನೋಡಿ ಸ್ಥಳೀಯರು ಆಶ್ಚರ್ಯ ಚಿಕಿತ್ತಾಗುವಂತಾಗಿದೆ.ನೋಡ ನೋಡುತ್ತಲೇ ಹೆಬ್ಬಾವು ನವಿಲನ್ನು ತನ್ನ ಬಾಯಿಂದ ಹೊರ ಕಕ್ಕಿದೆ.ಆದರೆ ದುರದೃಷ್ಟವಶಾತ್ ಆ ವೇಳೆಗಾಗಲೇ ಹೆಬ್ಬಾವಿನ ಹೊಟ್ಟೆ ಸೇರಿದ್ದ ನವಿಲು ತನ್ನ ಉಸಿರು ಕಳೆದು ಕೊಂಡಿತ್ತು.

ಬೇಣದಲ್ಲಿ ಕೆಲವು ದಿನಗಳ ಹಿಂದೆ ನವಿಲೊಂದು ಮೊಟ್ಟೆ ಇಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದು ಹೆಬ್ಬಾವು ಆ ನವಿಲನ್ಧು ನುಂಗಿರುವ ಸಾಧ್ಯತೆ ಕೇಳಿ ಬಂದಿದೆ. ಈ ಅಪರೂಪದ ದೃಶ್ಯವನ್ನು ಕಂಡು ಕೆಲವರು ನಿಬ್ಬೆರಗಾಗಿದ್ದಾರೆ. ನವಿಲನ್ನು ಕಕ್ಕಿದ ಹೆಬ್ಬಾವು ತನ್ನನ್ನು ಹಿಡಿಯುತ್ತಾರೆಂದು ಗೊತ್ತಾದ ತಕ್ಷಣ ಹಿಡಿಯಲು ಬಂದವರ ಮೇಲೆಯೇ ಎರಗಲು ಪ್ರಯತ್ನಿಸಿತ್ತು. ಅಲ್ಲದೇ ಅಲ್ಲಿಂದ ತಪ್ಪಿಸಿಕೊಂಡು ಜೋರಾಗಿ ತೆವಳಿ ಸಾಗುವ ಯತ್ನ ನಡೆಸಿತ್ತಾದರೂ ಉರಗ ಸಂರಕ್ಷಕ ಮಹೇಶ್ ನಾಯ್ಕ್ ಹೆಬ್ಬಾವನ್ನು ಹಿಡಿದು, ನಂತರ ಅರಣ್ಯ ಇಲಾಖೆಯ ಸಹಕಾರದಲ್ಲಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದು ಹಾವಿನ ಸಂರಕ್ಷಣೆ ಮಾಡಿ ಸ್ಥಳೀಯರ ಆತಂಕ ದೂರ ಮಾಡಿದರು. ಕೋಡಗನ ಕೋಳಿ ನುಂಗಿತ್ತ ಎಂಬ ಜಾನಪದ ಹಾಡನ್ನು ನೆನಪಿಸುವಂತೆ ಇಲ್ಲಿ ನವಿಲನ್ನು ಹೆಬ್ಬಾವು ನುಂಗಿತ್ತ ಎನ್ನುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version