Follow Us On

WhatsApp Group
Focus NewsImportant
Trending

ಅಕ್ರಮವಾಗಿ ಒಂಟೆಗಳ ಸಾಗಾಟ: ಮೂವರು ಆರೋಪಿಗಳ ಬಂಧನ

ಯಲ್ಲಾಪುರ: ಹಿಂಸಾತ್ಮಕ ರೀತಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಒಂಟೆಗಳ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ‌ ಇಲ್ಲಿನ ತಾಲೂಕಿನ ಜೋಡಿಕೆರೆ ಚೆಕ್​ಪೋಸ್ಟ್ ಬಳಿ ನಡೆದಿದೆ. ಆರೋಪಿಗಳು ಅಂದಾಜು‌ 3 ಲಕ್ಷ ಮೌಲ್ಯದ ಒಂಟೆ ಸಾಗಾಟ ಮಾಡುತಿದ್ದರು.

ಬಂಧಿತರನ್ನ ಕಾಂತೇಶ್, ಪ್ರಕಾಶ್, ಈಶ್ವರಪ್ಪ ಎಂದು ಗುರುತಿಸಲಾಗಿದೆ. ಬಂಧಿತರು‌ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದವರು ಎಂಬ ಮಾಹಿತಿ‌‌‌ ಸಿಕ್ಕಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಯಲ್ಲಾಪುರ

Back to top button