ಯಲ್ಲಾಪುರ: ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಗುಳ್ಳಾಪುರ ಸಮೀಪದ ಇಂಚರ ಹೊಟೇಲ್ ಹತ್ತಿರ ನಡೆದಿದೆ. ಲಾರಿಯನ್ನು ಅತಿವೇಗ ಮತ್ತು ನಿರ್ಲಕ್ಷದಿಂದ ಚಲಿಸಿ, ಬೈಕ್ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟ ಸವಾರರನ್ನು ಮಹಂತೇಶ ರೇವಣಪ್ಪ ಶೀಲವಂತರ( 23) ಹುಬ್ಬಳ್ಳಿ,ಹಾಗೂ ಸುಮಿತ್ ಅಶೋಕ ಬಸವಾ (25) ಹಳೆ ಹುಬ್ಬಳ್ಳಿ ಎಂದು ಗುರುತಿಸಲಾಗಿದೆ.
ಹೌದು, ಆರೋಪಿ ಲಾರಿ ಚಾಲಕ ಶಿವರಾಜ ಚಿಂಚಲಿ ತನ್ನ ಗೂಡ್ಸ್ ಲಾರಿಯನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗದಿಂದ ಹಾಗೂ ನಿರ್ಲಕ್ಷಿತವಾಗಿ ಚಲಿಸಿಕೊಂಡು ಬಂದ ಪರಿಣಾಮ ಗುಳ್ಳಾಪುರ ಸಮೀಪ ನಿಯಂತ್ರಣ ಕಳೆದುಕೊಂಡು ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ದುರ್ಘಟನೆಯಲ್ಲಿ ಹಿಂಬದಿಯ ಸವಾರ ಮಹಾಂತೇಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಸುಮಿತ್ ಮಾರಣಾಂತಿಕ ಗಾಯಗೊಂಡು ಯಲ್ಲಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ವಿಸ್ಮಯ ನ್ಯೂಸ್, ಕಾರವಾರ