Important
Trending

ಟ್ಯಾಗೋರ್ ಕಡಲತೀರದಲ್ಲಿ ಡಾಲ್ಪಿನ್ ಕಳೇಬರ ಪತ್ತೆ: ವಯೋಸಹಜ ಸಾವಿನ ಶಂಕೆ

ಕಾರವಾರ: ಟ್ಯಾಗೋರ್ ಕಡಲತೀರದಲ್ಲಿ ಡಾಲ್ಪಿನ್ ಶವ‌ ಪತ್ತೆಯಾಗಿದೆ. ಸುಮಾರು ಏಳು ಫೀಟ್ ಉದ್ದದ ಇಂಡೋ ಫೆಸಿಫಿಕ್ ಹಂಪ್ ಬ್ಯಾಕ್ ಹೆಣ್ಣು ಜಾತಿಯ ಡಾಲ್ವಿನ್ ಕಳೇಬರ ಇದು ಎಂದು ಗುರುತಿಸಲಾಗಿದೆ.

ಸುಮಾರು 35 ವರ್ಷ ವಯಸ್ಸಿನ ಈ ಡಾಲ್ಪಿನ್ ದೇಹದ ಒಳಭಾಗಗಳು ಹೊರಕ್ಕೆ ಬಂದಿವೆ. ಮರಣೋತ್ತರ ಪರೀಕ್ಷೆಯಲ್ಲಿ ಯಾವುದೇ ಆಂತರಿಕ ರಕ್ತಸ್ರಾವ, ಹೊಟ್ಟೆಯಲ್ಲಿ ಪ್ಲಾಸ್ಟಿಕ್ ವಸ್ತುಗಳು ಪತ್ತೆಯಾಗಿರದ ಕಾರಣ ಇದು ವಯೋಸಹಜ ಸಾವೆಂದು ಘೋಷಿಸಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button