Follow Us On

WhatsApp Group
Important
Trending

ಕಾಲಡಿ ಇಟ್ಟುಕೊಳ್ಳುವ ಮರದ ಹಲಗೆ ಎಕ್ಸಿಲೇಟರ್ ಮೇಲೆ ಬಿದ್ದು ಅವಾಂತರ : ರಸ್ತೆ ಪಕ್ಕದ ಅಂಗಡಿಗೆ ನುಗ್ಗಿದ ರಿಕ್ಷಾ

ಅಂಕೋಲಾ: ಪ್ಯಾಸೆಂಜರ್ ಆಟೊವೊಂದು ರಸ್ತೆ ಬಿಟ್ಟು ಅಂಗಡಿಗೆ ನುಗ್ಗಿದ ಘಟನೆ ತಾಲೂಕಿನ ಮಾದನಗೇರಿ ಸಮೀಪದ ಬಳಲೆಯ ವೃತ್ತದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ. ಹಠಾತ್ ಆಗಿ ರಿಕ್ಷಾ ಅಂಗಡಿಗೆ ನುಗ್ಗಿದ್ದರಿಂದ ಅಂಗಡಿ ಮಾಲಿಕ ಕ್ಷಣಕಾಲ ಕಂಗಾಲಾಗಿದ್ದಾನೆ.

ಕಾಲಡಿ ಇಟ್ಟುಕೊಳ್ಳುವ ಮರದ ಹಲಗೆ ಎಕ್ಸಿಲೇಟರ್ ಮೇಲೆ ಆಕಸ್ಮಿಕವಾಗಿ ಬಿದ್ದ ಪರಿಣಾಮ ಆಟೋ ನಿಯಂತ್ರಿಸಲಾಗದೆ ಈ ಅವಘಡ ಸಂಭವಿಸಿದೆ. ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button