Important
Trending

ಭಾರೀ ಮಳೆ: ಮನೆ‌ ಕುಸಿದು ಮಲಗಿದ್ದ ತಾಯಿ-ಮಗಳ ಸಾವು

ಕಾರವಾರ: ಉತ್ತರಕನ್ನಡದಲ್ಲಿ ಭಾರೀ‌ ಮಳೆಯಾಗುತ್ತಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಮಳೆಯ ಆರ್ಭಟಕ್ಕೆ
ಮನೆ ಗೋಡೆ ಕುಸಿದ ಪರಿಣಾಮ ತಾಯಿ, ಮಗಳು ಇಬ್ಬರು ಸಾವನ್ನಪ್ಪಿದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆದಿದೆ.

ಮನೆಯೊಳಗೆ ಗೋಡೆ ಪಕ್ಕದಲ್ಲೇ ತಾಯಿ-ಮಗಳು ಮಲಗಿದ್ದರು ಎನ್ನಲಾಗಿದ್ದು, ಬೆಳಗಿನ ಜಾವ ಈ ದುರಂತ ನಡೆದಿದೆ. ರುಕ್ಕಿಣಿ ಮಾಚಕ (37) ಮತ್ತು ಶ್ರೀದೇವಿ ಮಾಚಕ (13) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಮಣ್ಣಿನ ಮನೆಯಾಗಿದ್ದರಿಂದ ನಿರಂತರ ಮಳೆಗೆ ಗೋಡೆ ಕುಸಿದು ಬಿದ್ದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Back to top button