Follow Us On

WhatsApp Group
Important
Trending

ಮಾಜಾಳಿ ಕಡಲತೀರದಲ್ಲಿ 129 ಆಲಿವ್ ರಿಡ್ಲೆ ಕಡಲಾಮೆ ಮೊಟ್ಟೆಗಳ ರಕ್ಷಣೆ

ಕಾರವಾರ: ಆಲಿವ್ ರಿಡ್ಲೆ ಕಡಲಾಮೆ ತಾಲೂಕಿನ ಮಾಜಾಳಿ ಕಡಲತೀರದಲ್ಲಿ 129 ಮೊಟ್ಟೆಗಳನ್ನ ಇಟ್ಟಿದ್ದು, ಮೀನುಗಾರರ ಸಹಕಾರದಲ್ಲಿ ಅರಣ್ಯಾಧಿಕಾರಿಗಳು ಸಂರಕ್ಷಣೆ ಮಾಡಿದ್ದಾರೆ.. ಕಾರವಾರ ತಾಲೂಕು ದೇವಭಾಗ್, ಮಜಾಳಿ ಮತ್ತು ಅಂಕೋಲಾದ ಭಾವಿಕೇರಿ ಕಡಲತೀರ ಕಡಲಾಮೆ ಮೊಟ್ಟೆ ಇಡುವ ಪ್ರದೇಶಗಳಾಗಿ ಗುರುತಿಸಿಕೊಂಡಿವೆ ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಭಂದ 1ರಲ್ಲಿ ಸಂರಕ್ಷಿಸಲ್ಪಟ್ಟಿವೆ.

ಕನಸಿನಲ್ಲಿ ದೇವರು ಹೇಳಿತೆಂದು ನಿಧಿಯಾಸೆಗಾಗಿ ಅರಣ್ಯದಲ್ಲಿ ಬಾವಿ ತೋಡಿದ ನಾಲ್ವರು ವಶಕ್ಕೆ: ಸಾರ್ವಜನಿಕರು ಬೆಚ್ಚಿ ಬಿದ್ದಿರೋದು ಏನಕ್ಕೆ?

ಕಡಲಾಮೆಗಳು ನವೆಂಬರ್‌ನಿoದ ಮಾರ್ಚ ವರೆಗೆ ಮೊಟ್ಟೆ ಇಡುವ ಕಾಲವಾಗಿದ್ದು, ಮೊಟ್ಟೆಗಳಿಂದ 50- 60 ದಿನದ ನಂತರ ಮರಿಗಳಾಗಿ ಹೊರಬರುತ್ತವೆ.ಹಿಗಾಗಿ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್ ಕೆ.ಸಿ.ಅವರ ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿಗಳು ಒಟ್ಟು 129 ಮೊಟ್ಟೆಗಳನ್ನು ತೀರದಲ್ಲಿ ಸಂರಕ್ಷಿಸಿ ಇಡಲಾಗಿದೆ. ಕಳೆದ ವರ್ಷ 1500ಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿ ಸುಮಾರು 1300 ಮರಿಗಳನ್ನು ಯಶಸ್ವಿಯಾಗಿ ಸಮುದ್ರಕ್ಕೆ ಬಿಡಲಾಗಿತ್ತು.

ವಿಸ್ಮಯ ನ್ಯೂಸ್, ಕಾರವಾರ

Back to top button