ಕುಮಟಾ; ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಗುರುಪೂರ್ಣಿಮೆಯನ್ನು ಭಕ್ತಿಪೂರ್ವಕವಾಗಿ ಜಗದ್ಗುರುಗಳ ಪಾದುಕೆ ಪೂಜೆ ಮಾಡಿ, ಸಮಸ್ತ ವಿದ್ಯಾರ್ಥಿಗಳ ಮಾತೆಯರನ್ನು ಆಮಂತ್ರಿಸಿ, ವಿದ್ಯಾರ್ಥಿಗಳು ತಮ್ಮ ಮಾತೆಯ ಪಾದಪೂಜೆ ಮಾಡಿ ಮಾತೃ ವಂದನೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮನೆಯೆ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುʼ ಎಂಬ ಉಕ್ತಿಯಂತೆ ತಾಯಿಯೇ ಮಗುವಿಗೆ ಮೊದಲ ಗುರು ಎನ್ನುವುದನ್ನು ತಾಯಂದಿರ ಪಾದಪೂಜೆ ಮಾಡುವುದರ ಮೂಲಕ, ಗುರುಗಳ ಪಾದಪೂಜೆ ಮಾಡಿ ಆಚರಿಸಿ, ವಿದ್ಯಾರ್ಥಿಗಳಲ್ಲಿ ಮಾತಾಪಿತೃ, ಗುರುಹಿರಿಯರ ಬಗ್ಗೆ ಭಯ, ಭಕ್ತಿ, ಗೌರವ ಭಾವವನ್ನು ಹೊಂದುದುವುದರ ಬಗ್ಗೆ ಸಂಸ್ಕಾರವನ್ನು ಮೂಡಿಸಲಾಯಿತು. ತಾಯಿ-ತಂದೆ, ಗುರುವು ವ್ಯಕ್ತಿಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.
ವಿಶೇಷವಾಗಿ ಭಾರತದಲ್ಲಿ, ಗುರುವು ಶಿಕ್ಷಣವನ್ನು ನೀಡುವುದು ಮಾತ್ರವಲ್ಲದೆ ತನ್ನ ಶಿಷ್ಯರಲ್ಲಿ ಮೌಲ್ಯಗಳನ್ನು ಕಲಿಸುವ ಮತ್ತು ಜೀವನದ ಪ್ರಮುಖ ಪಾಠಗಳನ್ನು ಕಲಿಸುವ ವ್ಯಕ್ತಿ ಎಂದು ಗೌರವಿಸಲಾಗುತ್ತದೆ. ಆದ್ದರಿಂದ, ಜ್ಞಾನ, ಶಿಕ್ಷಣ ಅಥವಾ ಕೌಶಲ್ಯದ ರೂಪದಲ್ಲಿ ನಾವು ಯಾರ ಆಶೀರ್ವಾದವನ್ನು ಪಡೆಯುತ್ತೇವೆಯೋ ಅವರನ್ನು ಗೌರವಿಸಲು ಮೀಸಲಾದ ದಿನ ಈ ಗುರು ಪೂರ್ಣಿಮೆಯಾಗಿದೆ ಎಂಬ ಅರಿವನ್ನು ಮಕ್ಕಳಲ್ಲಿ ಮೂಡಿಸಲಾಯಿತು..
ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಲೀನಾ ಎಂ. ಗೊನೇಹಳ್ಳಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಶ್ರೀಮತಿ ರಂಜನಾ ಆಚಾರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿಗಳು ಗುರುವಿನ ಕುರಿತು ಭಜನೆ ಮಾಡಿದರು. ಶ್ರೀಮತಿ ಸುಮಂಗಲಾ ಭಟ್ ವೇದಘೋಷ ಹಾಡಿದರು.
ಕುಮಾರ ಆಯಾನ್ ಸ್ವಾಗತಿಸಿದನು. ಕುಮಾರ ಸುಮಿತ್ ನಾಯ್ಕ ಮತ್ತು ಕುಮಾರಿ ಸಿರಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸೌಭಾಗ್ಯ ಬಾಳೇರಿ ಮಾತೃ ವಂದನಾ ಮತ್ತು ಗುರು ಪೂರ್ಣಿಮೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡದರು. ಕುಮಾರ ಆರ್ಯನ್ ವಂದಿಸಿದನು.
ವಿಸ್ಮಯ ನ್ಯೂಸ್ ಕುಮಟಾ