Follow Us On

WhatsApp Group
Focus NewsImportant
Trending

ನೀರಿನಲ್ಲಿ ತೇಲಿಬಂದ‌ ಶವ: ಚಪ್ಪಲಿ ನೋಡಿ ಹುಡುಕಾಟ

ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ದುಗ್ಗುರಿನ ಕೃಷ್ಣ ಮಾಸ್ತಿ ಗೌಡ ಎಂಬವರು ಹರಿಯುವ ನೀರಿನಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತ ಪಟ್ಟಘಟನೆ ನಡದಿದೆ,

ದುಗ್ಗುರು ಸಮೀಪದ ರೈಲ್ವೆ ಗೆಟ್ ಬಳಿಯ ಕಾಲುವೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ನೀರು ಪಾಲಾಗಿದ್ದರು. ಸ್ಥಳದಲ್ಲಿ ಚಪ್ಪಲಿ ಇರುವುದು ನೋಡಿ ನಾಪತ್ತೆಯಾದವರ ಹುಡುಕಾಟ ನಡೆಸಲಾಗಿತ್ತು. ಬಳಿಕ ನೀರಿನಲ್ಲಿ ಮೃತ ದೇಹ ತೇಲಿ ಬಂದಿತ್ತು. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಠಾಣಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವದ ಮರಣೊತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ವಿಸ್ಮಯ ನ್ಯೂಸ್ , ಶ್ರೀಧರ್ ನಾಯ್ಕ , ಹೊನ್ನಾವರ

Back to top button