Big NewsFocus News
Trending

ಹೊನ್ನೆಗುಡಿ ಬಳಿ ಕಡಲಬ್ಬರ:ಕಡಲ ಕೊರೆತ ವೀಕ್ಷಿಸಿದ ತಹಶೀಲ್ದಾರ

ಅಂಕೋಲಾ: ತಾಲೂಕಿನ ಬೊಬ್ರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಗುಡಿಯ ಕಡಲ ಕೊರೆತ ಪ್ರದೇಶಕ್ಕೆ ತಹಶೀಲ್ಧಾರ ಉದಯ ಕುಂಬಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಕಡಲ ಕೊರೆತದ ತೀವ್ರತೆ ಹೆಚ್ಚುತ್ತಿದ್ದು ಹತ್ತಿರದಲ್ಲೇ ವಾಸವಾಗಿರುವ ತಮಗೆ ನೆಮ್ಮದಿಯಿಂದ ನಿದ್ರಿಸಲಾಗುತ್ತಿಲ್ಲ ಎಂದು ಕಡಲ ತೀರದಂಚಿನ ವಾಸಿಗಳು ದುಃಖ ತೋಡಿಕೊಂಡರೆ, ಅಕ್ಕಪಕ್ಷದ ಜನರು ತಮ್ಮ ಖಾಸಗೀ ಜಮೀನು ಕೊಚ್ಚಿ ಹೋಗುವ ಆತಂಕ ವ್ಯಕ್ತಪಡಿಸಿ ಸರ್ಕಾರ ನಮ್ಮ ಜೀವ ಹಾಗೂ ಆಸ್ತಿ ಪಾಸ್ತಿ ರಕ್ಷಣೆಗೆ ಮುಂದಾಗಬೇಕೆಂದರು.

ಈ ಹಿಂದಿನಿಂದಲೂ ಇದೇ ಕಡಲ ತೀರ ದಾಟಿಸುತ್ತ ಮುತ್ತಲಿನ ನಾಲ್ಕು ಗ್ರಾಮಗಳ ಪ್ರಮುಖ ಸಮಾಜವೊಂದರ ಸ್ಮಶಾನ ಭೂಮಿಗೆ ಹೋಗಿ ಬರ ರ ಲಾಗುತ್ತಿದ್ದು ಕಡಲ ತೀರ ಕೊಚ್ಚಿ ಹೋಗಿ ಸಮುದ್ರ ನೀರು ಮುನ್ನುಗ್ಗಿ ಬರುತ್ತದೆ. ಮಳೆಗಾಲದಲ್ಲಿ ಗ್ರಾಮದಲ್ಲಿ ಯಾರಾದರೂ ತೀರಿಕೊಂಡರೆ ಆ ವೇಳೆ ಶವಸಂಸ್ಕಾರಕ್ಕೆ ಕಟ್ಟಿಗೆ ಸಾಗಿಸುವುದು, ಮೃತದೇಹ ಸಾಗಿಸಲು ಅತೀವ ಕಷ್ಟ ಪಡಬೇಕಾಗುತ್ತದೆ ಎಂದು
ಎಂದು ಸ್ಥಳೀಯರು ತಹಶೀಲ್ಧಾರರ ಗಮನಕ್ಕೆ ತಂದು ಇಲ್ಲಿ ತಡೆಗೋಡೆ ನಿರ್ಮಾಣವಾದರೆ, ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ ಎಂದರು.

ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ತಹಶೀಲ್ಧಾರ ಉದಯ ಕುಂಬಾರ ಅವರು ಇಲ್ಲಿಯ ಪರಿಸ್ಥಿತಿಯನ್ನು ಬಂದರು ಇಲಾಖೆ ಮತ್ತಿತರ ಸಂಬಂಧಿಸಿದವರ ಗಮನಕ್ಕೆ ತಂದು ಮುಂದಿನ ಕ್ರಮಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರ ನಾಯ್ಕ, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ಲಲಿತಾ ಆಗೇರ, ಸಿಬ್ಬಂದಿ ರಾಮಾ ನಾಯ್ಕ,ಸ್ಥಳೀಯರಾದ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಹೊನ್ನೆಗುಡಿ ಕಡಲ ಕೊರತದಿಂದ ಸ್ಮಶಾನ ಮತ್ತು ಕರಿದೇವಸ್ಥಾನದ ಪ್ರದೇಶಕ್ಕೆ ಹೋಗಲು ಆಗುತ್ತಿರುವ ತೊಂದರೆ,ಮತ್ತು ಬದುಕು ಕೊಚ್ಚಿ ಹೋಗುವ ಆತಂಕದಲ್ಲಿರುವ ಸ್ಥಳೀಯರ ಪರವಾಗಿ ವಿಸ್ಮಯ ವಾಹಿನಿಯಲ್ಲಿ ವರದಿ ಬಿತ್ತರಿಸಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳ ಗಮನಕ್ಕೆ ತರಲು ಪ್ರಯತ್ನಿಸಿದ್ದನ್ನು ಸ್ಮರಿಸಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button