ಯಲ್ಲಾಪುರ: ಕಬ್ಬಿನಗದ್ದೆಗೆ ಬಂದ ಬೃಹತ್ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಘಟನೆ ತಾಲೂಕಿನ ಮದನೂರು ಗ್ರಾ.ಪಂ ವ್ಯಾಪ್ತಿಯ ಹುಲಗೋಡಿನಲ್ಲಿ ನಡೆದಿದೆ. ಹುಲಗೋಡಿನ ರಘುವೀರ ಗಜಾನನ ಮರಾಠಿ ಅವರ ಕಬ್ಬಿನಗದ್ದೆಗೆ ಬೃಹತ್ ಹೆಬ್ಬಾವು ಬಂದು ಆತಂಕ ಮೂಡಿಸಿತ್ತು. ವಿಷಯ ತಿಳಿದು ನಂತರ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಅಕ್ಬರ್ ಅಲಿ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಳಿಕ ಹಾವನ್ನು ಕಾಡಿಗೆ ಬಿಡಲಾಯಿತು.
ವಿಸ್ಮಯ ನ್ಯೂಸ್, ಕಾರವಾರ