Follow Us On

WhatsApp Group
Important
Trending

ರಾತ್ರಿ ಹೊಟೇಲ್‌ನಲ್ಲಿ ಊಟ ಮಾಡಿ ಮದ್ಯದ ಬಾಟಲಿ ತೆಗೆದುಕೊಂಡು ಹೋದ ವ್ಯಕ್ತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

ಭಟ್ಕಳ: ರಾತ್ರಿ ಹೊಟೇಲ್ ನಲ್ಲಿ ಕೆಲಸ ಮುಗಿಸಿ ಊಟ ಮಾಡಿ ಮದ್ಯ ಬಾಟಲಿ ತೆಗೆದುಕೊಂಡು ಹೋದ ವ್ಯಕ್ತಿಯ ಮೃತದೇಹ, ರೈಲ್ವೆ ಹಳಿ ಸಮೀಪ ಅನುಮಾನಾಸ್ಪದವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶೇಖರ ಮಂಜಯ್ಯ ನಾಯ್ಕ ಎಂದು ಗುರುತಿಸಲಾಗಿದೆ. ಈತ ರಾತ್ರಿ 11 ಗಂಟೆ ಸುಮಾರಿಗೆ ಹೋಟೆಲ್ ಗೆ ಕೆಲಸಕ್ಕೆ ಹೋದವನು ಊಟ ಮುಗಿಸಿ, ಸಾರಾಯಿ ಬಾಟಲಿ ತೆಗದುಕೊಂಡು ಹೋಗಿದ್ದ.

ಇದನ್ನೂ ಓದಿ: 21 ಹುದ್ದೆಗಳಿಗೆ ನೇಮಕಾತಿ: 10ನೇ ತರಗತಿ, ಐಟಿಐ, ಡಿಪ್ಲೊಮಾ ಆದವರು ಅರ್ಜಿ ಸಲ್ಲಿಸಬಹುದು

ಆದರೆ, ಬೆಳಿಗ್ಗೆ ಬೆಳಕೆ ಪಿನ್ನುಪಾಲ ರೈಲ್ವೆ ಹಳಿ ಪಕ್ಕದಲ್ಲಿ ಕೊಳೆತ ಸ್ಥಿತಿಯಲ್ಲಿ ಈತನ ಮೃತ ದೇಹ ಪತ್ತೆಯಾಗಿದೆ. ಈತನ ಸಾವಿನ ಬಗ್ಗೆ ಸಂಶಯವಿರುವ ಕಾರಣ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತನ ಸಂಬoಧಿ ವೆಂಕಟೇಶ ಮಂಜಯ್ಯ ನಾಯ್ಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಸಿ.ಪಿ.ಐ ಚಂದನ್ ಗೋಪಾಲ್, ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ,ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button