Big News
Trending

Biofuel: ಮುಂದಿನ 30 ವರ್ಷದಲ್ಲಿ ಬರಿದಾಗಲಿದೆ ತೈಲ ನಿಕ್ಷೇಪ? ಜೈವಿಕ ಇಂಧನ ಪರ್ಯಾಯದ ಆಶಾಕಿರಣ

ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನಾಚರಣೆ

ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಇಂಧನಗಳ ಬೇಡಿಕೆ ಹೆಚ್ಚುತ್ತಿದೆ, ನಮ್ಮ ಅವಶ್ಯಕತೆಗಳು ಮೀತಿ ಮೀರುತ್ತಾ ಇದ್ದಂತೆ ನಮ್ಮ ಸಂಪನ್ಮೂಲಗಳ ಲಭ್ಯತೆ ಕ್ಷೀಣಿಸುತ್ತಾ ಬಂದಿವೆ, ಕಚ್ಚಾ ಇಂಧನಗಳಿಗೆ ಪರ್ಯಾಯ ಈ ಜೈವಿಕ ಇಂಧನ, ಕಚ್ಚಾ ತೈಲಗಳ ಬದಲಾಗಿ ಪರಿಸರ ಸ್ನೇಹಿ ಇಂಧನಗಳ ಬಳಕೆ ಇಂದಿನ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದೆ. ಜೈವಿಕ ಇಂಧನಗಳ ಕುರಿತಾಗಿ ಹಲವಾರು ಸಂಶೋಧನೆಗಳು ನಡೆದಿದ್ದರೂ ಅದರ ಬಗ್ಗೆ ಸಮರ್ಪಕವಾದ ಅರಿವನ್ನು ಮೂಡಿಸಲು ಇನ್ನು ಸಾಧ್ಯವಾಗಿಲ್ಲ ಎನ್ನುವುದು ವಿಷಾದದ ಸಂಗತಿ, ಜೈವಿಕ ಇಂಧನ ಪರಿಸರ ಸ್ನೇಹಿಯಾಗಿದ್ದು, ಹೊಂಗೆ, ಹಿಪ್ಪೆ, ಸುರಹೊನ್ನೆ, ಜಟ್ರೋಪ, ಸಿಮಾರೂಬದಂತಹ ಮರಗಳ ಬೀಜಗಳಿಂದ ಜೈವಿಕ ಇಂಧನವನ್ನು ಉತ್ಪಾದನೆ ಮಾಡಲಾಗುತ್ತದೆ. ಇದರ ಜೊತೆಗೆ ಮೆಕ್ಕೆಜೋಳದ ದಂಟು, ಹತ್ತಿಗಿಡಗಳ ತ್ಯಾಜ್ಯ, ಕಬ್ಬಿನ ಸಿಪ್ಪೆ, ಕರಿದ ಎಣ್ಣೆ ತ್ಯಾಜ್ಯಗಳಿಂದಲೂ ಜೈವಿಕ ಇಂಧನವನ್ನು ತಯಾರಿಸಲಾಗುತ್ತದೆ, ಎರಡು ಪ್ರಮುಖ ಜೈವಿಕ ಇಂಧನಗಳೆoದರೆ ಜೈವಿಕ ಎಥೆನಾಲ್ ಮತ್ತು ಬಯೋ ಡಿಸೇಲ್, ಜೈವಿಕ ಇಂಧನ ಒಂದು ಸಂರಕ್ಷಣೀಯ ಮತ್ತು ನವೀಕರಿಸಬಹುದಾದ ಇಂಧನವಾಗಿದ್ದು ಇಂಗಾಲದ ಡೈ ಆಕ್ಸೆöÊಡ್ ಉತ್ಪತ್ತಿಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಪೂರಕವಾಗಿದೆ.

ಮುಂದಿನ 30 ವರ್ಷದಲ್ಲಿ ಬರಿದಾಗಲಿದೆ ತೈಲ ನಿಕ್ಷೇಪ?

ಭಾರತ ದೇಶದಲ್ಲಿ ಈ ಜೈವಿಕ ಇಂಧನಗಳ ಕ್ರಾಂತಿ ಈಗಿನ ತುರ್ತು ಅವಶ್ಯಕತೆಗಳಲ್ಲಿ ಒಂದಾಗಿದೆ, ಭಾರತದಲ್ಲಿ ಇಂಧನಗಳ ಉತ್ಪಾದನೆ ಪ್ರಮಾಣವೂ ಬಹಳ ಕಡಿಮೆ ಇದೆ, ಇದಕ್ಕೆ ಬಹುಮುಖ್ಯ ಕಾರಣ ಭಾರತದಲ್ಲಿನ ತೈಲ ನಿಕ್ಷೇಪಗಳ ಕೊರತೆ. ಭಾರತಕ್ಕೆ ಶೇಕಡಾ 83ರಷ್ಟು ಕಚ್ಚಾ ತೈಲಗಳ ಪೂರೈಕೆ ಕೊಲ್ಲಿ ರಾಷ್ಟçಗಳಾದ ಇರಾನ್, ಇರಾಕ್, ದುಬೈ ನಂತಹ ಓ. ಪಿ. ಇ. ಸಿ ರಾಷ್ಟçಗಳಿಂದ ಆಗುತ್ತಿದೆ, ಶೇಕಡಾ 80ರಷ್ಟು ಪರಾವಲಂಬಿಯಾಗಿರುವುದು ರಾಷ್ಟçದ ಅಭಿವೃದ್ಧಿ ದೃಷ್ಠಿಯಿಂದ ಶುಭಸೂಚಕವಲ್ಲ, ಅಷ್ಟೇ ಅಲ್ಲದೆ ವಿಶ್ವದ ತೈಲ ನಿಕ್ಷೇಪವು ಮುಂದಿನ 30 ವರ್ಷಗಳಲ್ಲಿ ಬರಿದಾಗುವ ಸೂಚನೆಯನ್ನು ನಮ್ಮ ವಿಜ್ಞಾನಿಗಳು ನೀಡಿದ್ದಾರೆ ಜೊತೆಗೆ ಭಾರತದ ತೈಲ ನಿಕ್ಷೇಪವು ಮುಂದಿನ ಹತ್ತು ವರ್ಷಗಳಿಗಾಗುವಷ್ಟು ಮಾತ್ರ ಲಭ್ಯವಿರುವುದಾಗಿ ವಿಜ್ಞಾನಿಗಳು ಊಹಿಸಿದ್ದಾರೆ, ಆದ್ದರಿಂದ ಭವಿಷ್ಯದ ದೃಷ್ಠಿಯಿಂದ ಪರ್ಯಾಯ ಇಂಧನದ ಕುರಿತಾಗಿ ಸಂಶೋಧನೆ, ಪ್ರಚಾರ ಮತ್ತು ಬಳಕೆ ಅತೀ ಅವಶ್ಯಕವಾಗಿದೆ, ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿ ಮಾಡುವಲ್ಲಿ ಈ ಜೈವಿಕ ಇಂಧನ ಏಕೈಕ ಆಶಾಕಿರಣವಾಗಿದೆ,

ಬದಲಾದ ಸನ್ನಿವೇಶದಲ್ಲಿ ಭಾರತ ದೇಶವೂ ಸರ್ವದೃಷ್ಠಿಯಿಂದಲೂ ಸ್ವಾವಲಂಬಿ ರಾಷ್ಟçವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ, ಆತ್ಮನಿರ್ಭರ ಭಾರತಕ್ಕೆ ಕರೆಕೊಡಲಾಗಿದೆ, ಇಂತಹ ಸ್ಥಿತಿಯಲ್ಲಿ ತೈಲಗಳ ಉತಾದನೆಯಲ್ಲಿಯೂ ನಾವು ಸ್ವಾವಲಂಬಿ ದೇಶವಾಗುವುದು ಅವಶ್ಯಕ, ಈ ವಿಷಯದ ಕುರಿತಾಗಿ ಈಗಲೇ ಎಚ್ಚೆತ್ತುಕೊಳ್ಳುವುದು ಅಗತ್ಯದ ಸಂಗತಿಯೇ ಸರಿ, ಭಾರತದಲ್ಲಿ ಜೈವಿಕ ಇಂಧನದ ಬಳಕೆಯನ್ನು ಮುನ್ನಲೆಗೆ ತರಲು ಪೂರಕವಾಗಿರುವ ಎಲ್ಲಾ ಅಂಶಗಳು ಇವೆ, ಭಾರತದಂತಹ ಕೃಷಿ ಪ್ರಧಾನವಾದ ದೇಶದಲ್ಲಿ ಜೈವಿಕ ಇಂಧನದ ಅಭಿವೃದ್ಧಿ ಅವಶ್ಯವಾಗಿ ಸಾಕಾರವಾಗುವುದು, ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಈ ಜೈವಿಕ ಕೃಷಿಗೆ ಪ್ರೋತ್ಸಾಹ ಮಾಡುವುದರ ಮೂಲಕವಾಗಿ ಅಲ್ಲಿಯೇ ಬೀಜಗಳ ಸಂಸ್ಕರಣೆ, ಎಣ್ಣೆ ತೆಗೆಯುವಿಕೆ, ಜೈವಿಕ ಇಂಧನದ ತಯಾರಿಕೆ ಹಾಗೂ ವಿವಿಧ ರೀತಿಯ ಮೌಲ್ಯವರ್ಧನಾ ಚಟುವಟಿಕೆಗಳನ್ನು ಮಾಡಬಹುದಾಗಿದ್ದು ಹಳ್ಳಿಗಳಲ್ಲಿ ಉದ್ಯೋಗವನ್ನು ಸೃಷ್ಠಿಸಬಹುದಾಗಿದೆ,

5 ಅಂಶಗಳು ಕ್ರಾಂತಿಯ ರೂಪದಲ್ಲಿ ಮುನ್ನಲೆಗೆ

ಇದು ಭಾರತದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ದೇಶದಲ್ಲಿನ ಕೃಷಿಗೆ ಯೋಗ್ಯವಾಗಿರದ ಬರಡು, ಬಂಜರು, ಭೂ ಪ್ರದೇಶಗಳಲ್ಲಿ, ನದಿ, ಕಾಲುವೆ ಹಾಗೂ ರೈತರ ಜಮೀನುಗಳ ಬೇಲಿ, ಸರ್ಕಾರಿ ಖಾಸಗಿ ಜಮೀನುಗಳಲ್ಲಿ, ಅತೀ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ, ಪಾಳು ಬಿದ್ದಿರುವ ಜಾಗಗಳಲ್ಲಿ ಈ ಜೈವಿಕ ಇಂಧನ ಸಸಿಗಳನ್ನು ಬೆಳೆಸಬಹುದಾಗಿದೆ, ಜೈವಿಕ ಇಂಧನದ ಅಭಿವೃದ್ಧಿ ನಮ್ಮ ದೇಶದಲ್ಲಿ ತ್ವರಿತಗತಿಯಲ್ಲಿ ಉಂಟಾಗಬೇಕು, ಇದಕ್ಕೆ ‘DIPAM’ ಎಂಬ 5 ಅಂಶಗಳು ಕ್ರಾಂತಿಯ ರೂಪದಲ್ಲಿ ಮುನ್ನಲೆಗೆ ಬರಬೇಕು, ಇಂಧನಗಳ ವಿಷಯದಲ್ಲಿ ಪರಾವಲಂಬಿ ಎಂಬ ಕತ್ತಲೆಯಿಂದ ಸ್ವಾವಲಂಬಿ ಗುರಿಯತ್ತ ಸಾಗಲು ಈ Deep Research, Imformation, promotion, Agriculture, Marketing   ಎಂಬ 5 ಅಂಶಗಳ ದೀಪವೂ ಬೆಳಕನ್ನು ಹರಿಸಬೇಕು.
ಜೈವಿಕ ಇಂಧನದ ವಿಷಯದಲ್ಲಿ ಮೊದಲಿಗೆ ಜೈವಿಕ ಇಂಧನದ ಸಸಿಗಳ ಕುರಿತಾಗಿ ಇನ್ನು ಆಳವಾದ ವೈಜ್ಞಾನಿಕ ಸಂಶೋಧನೆಯ ಅಗತ್ಯವಿದೆ, ಉತ್ತಮ ತಳಿಯ ಸಸಿಯ ಅಭಿವೃದ್ಧಿ, ಬೀಜಗಳ ಉತ್ಪಾದನೆ ಹಾಗೂ ಅನುಕೂಲಕರ ಹವಾಮಾನ ಗುರುತಿಸುವಿಕೆ ಮುಂತಾದ ವಿಷಯಗಳಲ್ಲಿ ಇನ್ನು ಸ್ಪಷ್ಟನೆಯನ್ನು ಪಡೆಯಬೇಕಾದ ಅವಶ್ಯಕತೆ ಇದೆ,

ಜೊತೆಗೆ ಜೈವಿಕ ಇಂಧನಗಳ ತಯಾರಿಕಾ ವಿಧಾನ, ಉಪಯೋಗಿಸುವ ಬೀಜಗಳು ಹಾಗೂ ಇತರೆ ವಸ್ತುಗಳು ಹೀಗೆ ಮುಂತಾದ ಎಲ್ಲಾ ವಿಷಯಗಳ ಪರಿಪೂರ್ಣ ಮಾಹಿತಿ ಪ್ರತಿಯೊಬ್ಬರಿಗೂ ದೊರಯಬೇಕು, ಪ್ರಚಾರ, ಇದು ಅತ್ಯಂತ ಅವಶ್ಯಕವಾದಂತಹ ಅಂಶ, ಇದಕ್ಕಾಗಿ ಪ್ರತಿ ಗ್ರಾಮ ಮಟ್ಟದಲ್ಲಿ ಜೈವಿಕ ಇಂಧನಗಳ ಕುರಿತಾಗಿ ಅರಿವು ಮೂಡಿಸಲು ಗ್ರಾಮ ಪಂಚಾಯತ್ ವತಿಯಿಂದ ಜೈವಿಕ ಇಂಧನ ಅಭಿವೃದ್ಧಿ ಕರ‍್ಯಪಡೆಯನ್ನು ರಚಿಸಬೇಕು, ಅದರ ಮೂಲಕವಾಗಿ ದೇಶದ ಪ್ರತಿಯೊಂದು ಗ್ರಾಮದಲ್ಲಿರುವ ರೈತನಿಗೆ ಈ ಜೈವಿಕ ಇಂಧನದ ಸಸಿಗಳ ಪ್ರಾಮುಖ್ಯತೆ ಹಾಗೂ ಅದರ ಕೃಷಿ ಮಾಡುವುದರಿಂದ ದೊರಕುವ ಲಾಭಗಳ ಕುರಿತಾಗಿ ಅರಿವು ಮೂಡಿಸಬೇಕು, ನಾಲ್ಕನೆಯ ಅಂಶ ಕೃಷಿ ಇದು ಉತ್ಪಾದನೆಯ ಹಂತ, ರೈತರಿಗೆ ಜೈವಿಕ ಇಂಧನಗಳ ಕುರಿತಾಗಿ ಮಾಹಿತಿ ಮತ್ತು ಸೌಲಭ್ಯ ದೊರಕಿದರೆ ಈ ಅಂಶವು ಯಶಸ್ವಿಯಾಗುತ್ತದೆ, ಇಲ್ಲಿ ಸರ್ಕಾರಗಳು ನೀಡುವ ಪ್ರೋತ್ಸಾಹ ಬಹಳ ಮುಖ್ಯವೆನಿಸಿದೆ, ಸಮರ್ಪಕವಾದ ಪ್ರೋತ್ಸಾಹವು ರೈತರಿಗೆ ದೊರಕಿದಾಗ ಅವರು ಜೈವಿಕ ಇಂಧನದ ಸಸಿಗಳ ಕೃಷಿಯನ್ನು ಮಾಡುತ್ತಾರೆ,

ಕೊನೆಯ ಹಂತ ಮಾರುಕಟ್ಟೆ, ರೈತರು ಬೆಳೆದಂತಹ ಸರಕನ್ನು ಖರೀದಿಸಿ ಅದನ್ನು ಜೈವಿಕ ಇಂಧನಗಳ ಉತ್ಪಾದನೆ ಮಾಡುವ ಘಟಕಗಳಿಗೆ ತಲುಪಿಸಬೇಕಾದ ವ್ಯವಸ್ಥೆ, ಇಲ್ಲಿ ರೈತರ ಸರಕುಗಳಿಗೆ ಉತ್ತಮ ಬೆಲೆ ದೊರಕಿದಾಗ ಹಾಗೂ ಜೈವಿಕ ಇಂಧನಗಳ ಉತ್ಪಾದನೆ ಮತ್ತು ಸರಬರಾಜು ನಿಯಮಿತವಾಗಿ ಕರ‍್ಯರೂಪಕ್ಕೆ ಬಂದಾಗ ಮಾತ್ರ ಭವಿಷ್ಯದಲ್ಲಿ ನಾವು ಜೈವಿಕ ಇಂಧನದ ಕ್ರಾಂತಿಯನ್ನು ಉತ್ತಮ ರೀತಿಯಲ್ಲಿ ಮಾಡಲು ಸಾಧ್ಯ. ಜೈವಿಕ ಇಂಧನದ ಅಭಿವೃದ್ಧಿಯಲ್ಲಿ ಸರ್ಕಾರವು ಹಲವಾರು ಕರ‍್ಯಕ್ರಮಗಳನ್ನು ಕೈಗೊಂಡಿದೆ, ಹಸಿರು ಹೊನ್ನು, ಬರಡು ಬಂಗಾರ ಮುಂತಾದ ಕರ‍್ಯಕ್ರಮಗಳು ಜೈವಿಕ ಇಂಧನದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಇದರ ಹೊರತಾಗಿ ಇನ್ನು ಹೆಚ್ಚಿನ ಕರ‍್ಯಕ್ರಮಗಳು ಅನುಷ್ಠಾನಕ್ಕೆ ಬರಬೇಕು, ಜೈವಿಕ ಇಂಧನ ಉತ್ಪಾದನಾ ಘಟಕ, ಸಣ್ಣ ಬೀಜ ಸಂಸ್ಕರಣಾ ಘಟಕ, ಮಾಹಿತಿ ಕೇಂದ್ರಗಳನ್ನು ಪ್ರತಿಯೊಂದು ಗ್ರಾಮದಲ್ಲಿಯೂ ಸ್ಥಾಪಿಸಬೇಕು, ಜೈವಿಕ ಇಂಧನಗಳನ್ನು ಬಳಸುವಂತಹ ಸ್ವಾವಲಂಬಿ ಕ್ರಾಂತಿ ಉಂಟಾಗಬೇಕು,,,,,,,,,

ಲೇಖನ: ಶ್ರೀ ಮಹಾದೇವ ಬೊಮ್ಮು ಗೌಡ, ವಿಜ್ಞಾನ ಶಿಕ್ಷಕರು, ಸೆಕೆಂಡರಿ ಹೈಸ್ಕೂಲ್, ಹಿರೇಗುತ್ತಿ

Back to top button