Follow Us On

Google News
Important
Trending

ವಿಸ್ಮಯ ಟಿ.ವಿ ಆನ್‌ಲೈನ್ ವೆಬ್‌ಸೈಟ್ ಪ್ರಾರಂಭ

‘ನೀವೇಕೆ ಇನ್ನೂ ವಿಸ್ಮಯ ಟಿ.ವಿ ವೆಬ್‌ಸೈಟ್ ಆರಂಭಿಸಿಲ್ಲ?’ ಎಂಬ ಜಿಲ್ಲೆಯ ಜನರ ಪ್ರೀತಿಪೂರ್ವಕ ಒತ್ತಾಯಕ್ಕೆ ಮಣಿದು, ನಿಮ್ಮೆಲ್ಲರ ಬಹುದಿನಗಳ ಒತ್ತಾಸೆಯೊಂದು ಈಗ ಮೈದಳೆದು ನಿಮ್ಮ ಮುಂದೆ ನಿಂತಿದೆ.ಪರಿವರ್ತನಶೀಲ ಮನಸ್ಸಿನ ಹಾಗೂ ಯುವ ಓದುಗರ ನಿರಂತರ ಕೋರಿಕೆಯ ಫಲ, ವಿಸ್ಮಯ ಟಿ.ವಿ ಬಳಗದ ಸಾತ್ವಿಕ ಚಿಂತನೆಯ ಚಿಲುಮೆ, ಯೋಜನೆ-ಯೋಚನೆಗಳ ಫಲಶ್ರುತಿಯೇ ಈ ತಾಣ. ಹೌದು, ಗುಣಮಟ್ಟದ ಸುದ್ದಿಮೂಲಕ ಅತಿಕಡಿಮೆ ಅವಧಿಯಲ್ಲಿ ಜಿಲ್ಲೆಯ ಜನರ ಮೆಚ್ಚುಗೆ ಗಳಿಸಿ, ಎಲ್ಲರ ಮನೆಮಾತಾದ ವಿಸ್ಮಯ ಟಿ.ವಿ ಇದೀಗ ತನ್ನ ಆನ್‌ಲೈನ್ ಆವೃತ್ತಿ https://vismaya24x7.com/ ಆರಂಭಿಸಿದೆ…. ಅಂತರ್ಜಾಲದ ಕ್ಷಿಪ್ರ ಬೆಳವಣಿಗೆಯಲ್ಲಿ ಜನ ಮಾನಸಕ್ಕೆ ಮತ್ತಷ್ಟು ಆಪ್ತವಾಗುವ ಪರಿಕಲ್ಪನೆಯಲ್ಲಿ, ಓದುಗರ ಅಭಿರುಚಿಯನ್ನೂ, ವೀಕ್ಷಕ ವರ್ಗದ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಈ ತಾಣವು ರೂಪುಗೊಂಡಿದೆ.
ಜಿಲ್ಲೆಯ ಜನರ ಬೇಡಿಕೆ ಧ್ವನಿಯಾಗಿರುವ, ಸಮಸ್ಯೆಗೆ ಸ್ಪಂದಿಸಿರುವ, ನಿಮ್ಮೊಡಲ ಕಳಕಳಿಗೂ ವೇದಿಕೆಯಾಗಿರುವ ವಿಸ್ಮಯ ಟಿ.ವಿಯ ಈ ಆನ್‌ಲೈನ್ ಆವೃತ್ತಿ, ಮೂಲೆ ಮೂಲೆಯಲ್ಲಿರುವ ಉತ್ತರಕನ್ನಡ ಜಿಲ್ಲೆಯ ಮನಸ್ಸುಗಳನ್ನು ಮುಟ್ಟುವ, ನಿಖರ ಸುದ್ದಿಗಳನ್ನು ಬಹುಬೇಗ ತಲುಪಿಸುವ ಕಾಯಕಕ್ಕೆ ಮತ್ತಷ್ಟು ವೇಗ ನೀಡಲಿದೆ.. ಈ ಎಲ್ಲ ಬೆಳವಣಿಗೆಯಲ್ಲಿ ಓದುಗರ, ವೀಕ್ಷಕರ ಪಾತ್ರ ಮಹತ್ವದ್ದು, ನಿಮ್ಮ ಸಲಹೆ-ಸೂಚನೆಗಳು ನಮಗೆ ಆಕ್ಸಿಜನ್ ಇದ್ದಂತೆ. ಸದ್ಯಕ್ಕೆ ವಿಸ್ಮಯ ಟಿ.ವಿಯ ಆನ್‌ಲೈನ್ ಆವೃತ್ತಿ ನಿಮ್ಮ ಮುಂದಿದೆ. ನಿಮ್ಮ ಕಾಳಜಿಗೆ, ಪ್ರೀತಿಗೆ, ಬೇಡಿಕೆಗೆ ಸ್ಪಂದಿಸಿರುವ ಧನ್ಯತಾ ಭಾವ ನಮಗಿದೆ. ವಿಸ್ಮಯ ಟಿ.ವಿಯನ್ನು ಯಾವ ರೀತಿ ಬೆಂಬಲಿಸಿದ್ದಿರೋ, ಅದೇ ರೀತಿ ಬೆಂಬಲವಿರಲಿ. ವಿಸ್ಮಯ ಟಿ.ವಿಯ ಉಚಿತ ವೆಬ್‌ಸೈಟಿನ ಯುಆರ್‌ಎಲ್: https://vismaya24x7.com/ ಈ ವೆಬ್‌ಸೈಟಿಗೆ ಭೇಟಿ ನೀಡಿ ಬೆಲ್ ಐಕಾನ್ ಕ್ಲಿಕ್ ಮಾಡಿ, ನಿರಂತರವಾಗಿ ಸುದ್ದಿಯನ್ನು ಪಡೆಯಿರಿ.ನಮಸ್ಕಾರ..

– ವಿಷ್ಣು ಹೆಗಡೆ, ಪ್ರಧಾನ ಸಂಪಾದಕರು, ವಿಸ್ಮಯ ಟಿ.ವಿ

Back to top button