ಅಂಕೋಲಾದಲ್ಲಿ 8 ಪ್ರಕರಣಗಳಷ್ಟೆ ಸಕ್ರೀಯ

ಅಂಕೋಲಾ : ಜುಲೈ 1ರಂದು ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ತಾಲೂಕಿನ 27 ವರ್ಷದ ಪುರುಷ(6283) ಗುಣಮುಖರಾಗಿದ್ದು ಆತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಇದೇ ವೇಳೆ ಹಳಿಯಾಳದ ಮೂವರು ಮತ್ತು ಶಿರಸಿಯ ಈರ್ವರನ್ನು ಸೋಂಕಿನಿಂದ ಗುಣಮುಖರಾದ ಹಿನ್ನಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ.
ಅಂಕೋಲಾದಲ್ಲಿ ಈವರೆಗೆ ಒಟ್ಟೂ 21 ಸೋಂಕಿನ ಪ್ರಕರಣಗಳು ಧೃಡಪಟ್ಟಿದ್ದವು. ಸೋಂಕಿತರ ಪೈಕಿ ಭಾವಿಕೇರಿ ಮಹಿಳೆ ಜೂನ್24ರಂದು ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ತದನಂತರ ಅಗ್ರಗೋಣ-ಶೇಡಿಕಟ್ಟಾ ವ್ಯಾಪ್ತಿಯ ಈರ್ವರು ಮತ್ತು ಐವರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದರು. ಮತ್ತೆ ಮೂವರು, ತರುವಾಯ ನಿನ್ನೆ ಸೋಂಕಿನಿಂದ ಗುಣಮುಖನಾಗಿ ಬಿಡುಗಡೆಯಾದ ಅಗ್ರಗೋಣ-ಶೇಡಿಕಟ್ಟಾ ವ್ಯಾಪ್ತಿಯ ಪ್ರಥಮ ಸೋಂಕಿತ ಸಹಿತ ಒಟ್ಟು 12 ಜನರು ಗುಣಮುಖರಾಗಿ 9 ಪ್ರಕರಣಗಳು ಸಕ್ರೀಯವಾಗಿದ್ದವು. ಇಂದು ತಾಲೂಕಿನ ಇನ್ನೋರ್ವನ ಬಿಡುಗಡೆ ಮೂಲಕ ಕೇವಲ 8 ಪ್ರಕರಣಗಳು ಇದ್ದು ಅವರೆಲ್ಲರೂ ಶೀಘ್ರ ಚೇತರಿಸಿಕೊಂಡು ತಮ್ಮ ತಮ್ಮ ಮನೆ ಸೇರಿಕೊಳ್ಳುವಂತಾಗಲಿ ಎಂಬುದು ತಾಲೂಕಿನ ಜನತೆಯ ಆಶಯವಾಗಿದೆ.

ಕಳೆದ 5 ದಿನಗಳಿಂದ ಯಾವುದೇ ಹೊಸ ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳದೇ ಜನತೆ ನೆಮ್ಮದಿಯಿಂದಿರುವಂತಾಗಿದೆ. ಸಂಡೇ ಲಾಕ್-ಡೌನ್‍ಗೆ ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆಯಾದರೂ, ಲಾಕ್-ಡೌನ್ ಮುನ್ನಾ ದಿನ ಶನಿವಾರದ ಸಂತೆ ಇರದಿದ್ದರೂ, ಪಟ್ಟಣದ ಮುಖ್ಯರಸ್ತೆಗಳಲ್ಲಿ ಜನಜಂಗುಳಿ ಹೆಚ್ಚಾಗಿ ಕಂಡುಬಂದಿರುವುದು ಅಪಾಯದ ಎಚ್ಚರಿಕೆ ನೀಡುತ್ತಿದೆ. ಈ ಕುರಿತು ಸಾರ್ವಜನಿಕರೇ ಸ್ವತಃ ಜಾಗೃತರಾಗಿರಬೇಕು ಮತ್ತು ಸಂಬಂಧಿಸಿದ ಇಲಾಖೆಗಳು ಕೆಲ ಕಟ್ಟುನಿಟ್ಟಿನ ಮುಂಜಾಗೃತೆ ವಹಿಸಬೇಕೆಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version