Big News
Trending

ಜಿಲ್ಲೆಯಲ್ಲಿಂದು 13 ಕರೊನಾ ಕೇಸ್ ದೃಢ

ಕಾರವಾರ: 5
ಭಟ್ಕಳ: 3
ಸಿದ್ದಾಪುರ: 2
ಹಳಿಯಾಳ: 1
ಕುಮಟಾ: 1
ದಾಂಡೇಲಿ: 1

ಕಾರವಾರ: ಉತ್ತರಕನ್ನಡ ಜಿಲ್ಲೆಯ 13 ಮಂದಿಯಲ್ಲಿ ಇಂದು ಕರೊನಾ ಪಾಸಿಟಿವ್ ಬಂದಿದೆ. ಕಾರವಾರದಲ್ಲಿ ಐವರಿಗೆ ಸೋಂಕು ತಗುಲಿದೆ. ಕಾರವಾರದಲ್ಲಿ ಆರೋಗ್ಯ ಸಿಬ್ಬಂದಿಯಾದ 25 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ. ಅಲ್ಲದೆ, ಬೆಂಗಳೂರಿನಿAದ ಬಂದ 16 ವರ್ಷದ ಯುವಕನಿಗೂ ಪಾಸಿಟಿವ್ ಬಂದಿದೆ.

ಭಟ್ಕಳದಲ್ಲಿ 3 ಕೇಸ್ ದೃಢ:
ಉಳಿದಂತೆ ಭಟ್ಕಳ ತಾಲೂಕಿನಲ್ಲಿ ಇಂದು ಮೂರು ಪ್ರಕರಣ ಕಾಣಿಸಿಕೊಂಡಿದೆ. ಇದರಲ್ಲಿ ಓರ್ವ ಬೆಂಗಳೂರಿನ ಟ್ರಾವೆಲ್ ಹಿಸ್ಟರಿ ಹೊಂದಿದ್ದಾನೆ. 17 ವರ್ಷದ ಬಾಲಕ ಮತ್ತು ಮುಗ್ದಮ್ ಕಾಲೋನಿಯ 23 ವರ್ಷದ ಯುವಕನಿಗೂ ಪಾಸಿಟಿವ್ ಬಂದಿದೆ.

ಸಿದ್ದಾಪುರದಲ್ಲಿ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು:
ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ 44 ವರ್ಷದ ಓರ್ವ ಸಿಬ್ಬಂದಿಗೆ ಹಾಗೂ ಇನ್ನೋರ್ವ ರೋಗಿಗೆ ಸೋಂಕು ದೃಢಪಟ್ಟಿದೆ.

[sliders_pack id=”1487″]

ಕುಮಟಾದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಪಾಸಿಟಿವ್:
ಇದೇ ವೇಳೆ, ಕುಮಟಾದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೂ ಸೋಂಕು ಪತ್ತೆಯಾಗಿದೆ.
ಇಂದು ಪತ್ತೆಯಾದ 13 ಪ್ರಕರಣಗಳಲ್ಲಿ ಮೂರು ಪ್ರಕರಣದಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ.

ಉಳಿದಂತೆ ಇಂದು ಕುಮಟಾ, ಹೊನ್ನಾವರ, ಶಿರಸಿ ಮತ್ತು ಅಂಕೋಲಾದಲ್ಲಿ ಪ್ರಕರಣ ಕಂಡುಬರದಿರುವುದು ಈ ಭಾಗದ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button