Important
Trending

KSRTC ಬಸ್ ವಶಕ್ಕೆ ಪಡೆದ ನ್ಯಾಯಾಲಯ! ಒಂದೇ ಪ್ರಕರಣದಲ್ಲಿ ನಾಲ್ಕನೇ ಬಾರಿ ಬಸ್ ದಸ್ತಗಿರಿ

ಶಿರಸಿ: ನ್ಯಾಯಾಲಯದ ಆದೇಶವಿದ್ದರೂ ಪರಿಹಾರ ನೀಡಿದೆ ಸತಾಯಿಸುತ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ನ್ಯಾಯಾಲಯ ದಸ್ತಗರಿ ಮಾಡಿದ ಘಟನೆ ತಾಲೂಕಿನಲ್ಲಿ ನಡೆದಿದೆ. ವಿಶೇಷ ಅಂದರೆ ಒಂದೇ ಪ್ರಕರಣಕ್ಕೆ ಸಂಬoಧಿಸಿದoತೆ ನಾಲ್ಕನೇ ಬಾರಿ ಬಸ್ಸನ್ನು ನ್ಯಾಯಾಲಯ ವಶಕ್ಕೆ ಪಡೆದಿದ್ದು, ಆದೇಶದ ನಂತರವೂ ಪರಿಹಾರ ನೀಡಿದೆ ಸತಾಯಿಸುತ್ತಿದ್ದ ಸಾರಿಗೆ ಸಂಸ್ಥೆ ಬಿಸಿ ಮುಟ್ಟಿಸಿದೆ.

ಇದನ್ನು ಓದಿ:ಉದ್ಯೋಗಾವಕಾಶ: ೧೦ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು

2019ರಲ್ಲಿ ಶಿರಸಿ ಹಾವೇರಿ ರಸ್ತೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ 21 ಲಕ್ಷದ 46 ಸಾವಿರ ರೂಪಾಯಿ ಪರಿಹಾರವನ್ನು ಸಂಬoಧಪಟ್ಟ ಕುಟುಂಬಕ್ಕೆ ನೀಡುವಂತೆ ಆದೇಶ ನೀಡಿತ್ತು. ಆದರೆ, ಇನ್ನೂ 11 ಲಕ್ಷ ಹಣ ಬಾಕಿ ಇದ್ದು, ಹೀಗಾಗಿ ಬಸ್ಸನ್ನು ದಸ್ತಗಿರಿ ಮಾಡಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Back to top button