Focus NewsImportant
Trending
ಹಿಟ್ ಆಂಡ್ ರನ್ ಕೇಸ್ : ಖಾಸಗಿ ಬಸ್ ಬಡಿದು ಬೈಕ್ ಸವಾರ ಸಾವು: ಅಪಘಾತದ ಬಳಿಕ ಬಸ್ ಸಮೇತ ಪರಾರಿಯಾದ ಬಸ್ ಚಾಲಕ
ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರ
ಶಿರಸಿ:ಖಾಸಗಿ ವಾಹನ ಬಡಿದು ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕುಮಟಾ ರಸ್ತೆಯ ಹೆಡಿಗೆ ಮನೆಕ್ರಾಸ್ ಹತ್ತಿರ ಶನಿವಾರ ನಡೆದಿದೆ.ಹೀಪನಳ್ಳಿ ಗ್ರಾಮದ ಹೆಡಿಗೆ ಮನೆ ದಾಸನಕೊಪ್ಪದ ವಿಶ್ವನಾಥ ಗಜಾನನ ಹೆಗಡೆ (53) ಎಂಬಾತನೇ ಮೃತ ಪಟ್ಟ ವ್ಯಕ್ತಿಯಾಗಿದ್ದಾನೆ.
ಕುಮಟಾ ರಸ್ತೆಯಿಂದ ಹೆಡಿಗೆಮನೆ ಕ್ರಾಸ್ ಬಳಿ ತನ್ನ ವಾಹನದ ಇಂಡಿಕೇಟರ್ ಹಾಗಿ ತಿರುಗಿಸುವಾಗ ಅತೀ ವೇಗವಾಗಿ ಬಂದ ಸೀಬರ್ಡ್ ಕಂಪನಿ ಬಸ್, ಬೈಕ್ ಸವಾರನಿಗೆ ಡಿಕ್ಕಿ ಹೋಡಿದಿದೆ. ಜೊತೆಗೆ ಎದುರಿಗೆ ಬರುತ್ತಿದ್ದ ಇನ್ನೋರ್ವ ಬೈಕ್ ಸವಾರಿನಿಗೂ ಅಪಘಾತ ಪಡಿಸಿ ಬಸ್ ಸಮೇತ ಚಾಲಕ ಪರಾರಿಯಾಗಿದ್ದಾನೆ.
ಡಿಕ್ಕಿಯ ರಭಸಕ್ಕೆ ಮೃತ ಬೈಕ್ ಸವಾರ ರಸ್ತೇಯ ಮೇಲೆ 30ರಿಂದ 40ಅಡಿ ತೇಯ್ದು ಕೊಂಡುಹೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಒಟ್ಟಿನಲ್ಲಿ ಕುಮಟಾ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸುದಂತಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಸ್ಮಯ ನ್ಯೂಸ್ ಶಿರಸಿ