Follow Us On

WhatsApp Group
Important
Trending

ವನಮಹೊತ್ಸವ ಕಾರ್ಯಕ್ರಮ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಗಿಡ ವಿತರಣಾ ಕಾರ್ಯಕ್ರಮ

ಪ್ರತಿ ವಿದ್ಯಾರ್ಥಿಗಳಿಗೂ ಗಿಡ ನೀಡುವ ಮೂಲಕ ಪರಿಸರದ ಜಾಗೃತಿ

ಹೊನ್ನಾವರ: ಪಟ್ಟಣದ ಸೆಂಥ್ ಥಾಮಸ್ ಪ್ರೌಢಶಾಲೆಯಲ್ಲಿ ಲಯನ್ಸ ಕ್ಲಬ್ ವತಿಯಿಂದಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಗಿಡ ವಿತರಣಾ ಕಾರ್ಯಕ್ರಮ ನಡೆಯಿತು. ಶಾಲಾ ಆವರಣದ ಸುತ್ತಲೂ ಲಯನ್ಸ್ ಸದಸ್ಯರು ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯ ನಡೆಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಲಯನ್ಸ್ ಅಧ್ಯಕ್ಷ ಕೆ.ಸಿ.ವರ್ಗಿಸ್ ಮಾತನಾಡಿ ಪ್ರಕೃತಿಯ ಸಮತೋಲನ ಕಾಪಾಡಿಕೊಂಡು ಮಣ್ಣು ಹಾಗೂ ಮನುಷ್ಯನ ಸಂಭದ ಗಟ್ಟಿಯಾಗಿಸಲು ವನಮಹೊತ್ಸಹ ಆಚರಿಸಲಾಗುವುದು. ನಮ್ಮ ಸುತ್ತಮುತ್ತಲಿನ ಖಾಲಿ ಇರುವ ಪ್ರದೇಶದಲ್ಲಿ ಹೆಚ್ಚಿನ ಗಿಡಗಳನ್ನು ನೆಡುವ ಮೂಲಕ ಆಕ್ಸಿಜನ ಕೊರತೆ ನಿವಾರಿಸಬೇಕಿದೆ. ಆ ನಿಟ್ಟಿನಲ್ಲಿ ಲಯನ್ಸ ಕ್ಲಬ್ ಹಲವು ವರ್ಷದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಇಂದು ಎಲ್ಲರ ಸಹಕಾರದಿಂದ ಯಶ್ವಸಿಯಾಗಿಸಿದೆ. ಪ್ರತಿ ವಿದ್ಯಾರ್ಥಿಗಳಿಗೂ ಗಿಡ ನೀಡುವ ಮೂಲಕ ಪರಿಸರದ ಜಾಗೃತಿ ಮೂಡಿಸಲು‌ ಮುಂದಾಗಿದೆ ಎಂದರು.

ಈ ವೇಳೆ ಕಾಲೇಜಿನ ಪ್ರಾಚಾರ್ಯರಾದ ಸುಲೆಮೆನ್ ಬೈಲೂರು, ಶಾಲೆಯ ಮ್ಯಾನೇಜರ್ ಫಾದರ್ ಲಿಜೋ, ಲಯನ್ಸ ಕಾರ್ಯದರ್ಶಿ ರಾಜೇಶ ಸಾಳೆಹಿತ್ತಲ್, ಖಜಾಂಚಿ ರೋಶನ್ ಶೆಟ್ ಸದಸ್ಯರಾದ ಎನ್.ಜಿ.ಭಟ್, ಎ.ವಿ.ಶ್ಯಾನಭಾಗ, ಶಾಂತರಾಮ ನಾಯ್ಕ, ಡಿ.ಡಿ.ಮಡಿವಾಳ, ಎಸ್.ಕೆ.ನಾಯ್ಕ, ಶೇಖರ ನಾಯ್ಕ, ಎಲ್.ಕೆ.ತೇಲಂಗ, ಮಹೇಶ ನಾಯ್ಕ, ದೀಪಕ ನಾಯ್ಕ, ಕೆ.ಆರ್.ಹೆಗಡೆ, ಮಂಜುನಾಥ ಆಚಾರ್ಯ, ಎಸ್.ಕುಸುಮಾ ಮತ್ತಿತರರು ಹಾಜರಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ್‌ ನಾಯ್ಕ ಹೊನ್ನಾವರ

Back to top button