Follow Us On

WhatsApp Group
Focus NewsImportant
Trending

ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತ ದೇಹ ಪತ್ತೆ: ಲಕ್ಷ್ಮಣನ ಸಾವಿನ ಬಗ್ಗೆ ಅಣ್ಣ ರಾಮ ನೀಡಿದ  ದೂರೇನು ?

ಅಂಕೋಲಾ: ತಾಲೂಕಿನ ಸುಂಕಸಾಳದ ಅಡಕುಳದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿ ಯೋರ್ವನ ಮೃತ ದೇಹ ಪತ್ತೆಯಾಗಿದ್ದು ಮೃತ ವ್ಯಕ್ತಿಯನ್ನು ಸುಂಕಸಾಳ ವಡಬೇಣ ನಿವಾಸಿ ಲಕ್ಷ್ಮಣ ನಾರಾಯಣ ಕುಣಬಿ (39) ಎಂದು ಗುರುತಿಸಲಾಗಿದೆ.  ಸರಾಯಿ ಕುಡಿತದ ದಾಸನಾಗಿದ್ದ ಈತ ಇತ್ತೀಚೆಗೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಅಕ್ಟೋಬರ್ 23 ರಂದು ಸಂಜೆ 7 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದ ಈತ ಮನೆಗೆ ಮರಳಿ ಬಂದಿರದ ಕಾರಣ  ಆತನ ಕುಟುಂಬಸ್ಥರು, ಸ್ಥಳೀಯರ ಸಹಕಾರದಲ್ಲಿ ಈತನ ಪತ್ತೆಗೆ ಎಲ್ಲಡೆ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ.

ರಸ್ತೆ ದಾಟುತ್ತಿದ್ದ ವೃದ್ಧ‌ ಮಹಿಳೆಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮಹಿಳೆ ದರ್ಮರಣ

ಈ ವೇಳೆ ಆತನ ಮೃತ ದೇಹ , ಗಣಪತಿ ರಾಮಚಂದ್ರ ಶೇಟ್ ಎನ್ನುವವರಿಗೆ ಸೇರಿದ ಜಮೀನಿನಲ್ಲಿ  ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ ತನಗೆ ಇರುವ ಕಾಯಿಲೆ ಗುಣ ಆಗದೇ ಇರುವುದನ್ನು ಅಥವಾ ಬೇರೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು  ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ಮೃತ ಲಕ್ಷ್ಮಣನ ಸಹೋದರ ರಾಮ ಪೊಲೀಸ್ ದೂರು ನೀಡಿದ್ದು, ಪಿ.ಎಸ್.ಐ ಪ್ರವೀಣಕುಮಾರ  ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಂಕೋಲಾ  ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕ ಆಸ್ಪತ್ರೆ ಶವಗಾರಕ್ಕೆ  ಸಾಗಿಸಿ , ಕಾನೂನು ಕ್ರಮ ಮುಂದುವರೆಸಲಾಗಿದೆ.               

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

hitendra naik

Back to top button