Important
Trending

ಶಾಂತಿ ಭಂಗಕ್ಕೆ, ಸೌಹಾರ್ದತೆಗೆ ಧಕ್ಕೆ ತರುವ ಸಂದೇಶಗಳನ್ನು ರವಾನಿಸುವವರ ಮೇಲೆ ನಿರಂತರ ನಿಗಾ: ರಾತ್ರಿ ವೇಳೆ ಗಸ್ತು ಹೆಚ್ಚಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೇಳಿದ್ದೇನು ನೋಡಿ?

ಕಾರವಾರ: ಉತ್ತರಕನ್ನಡ ಕೂಡಾ ಸೂಕ್ಷ್ಮ ಪ್ರದೇಶವಾಗಿದ್ದು, ದಕ್ಷಿಣ ಕನ್ನಡದ ಗಲಭೆ ಉತ್ತರಕನ್ನಡಕ್ಕೆ ಹಬ್ಬದಂತೆ ಪೊಲೀಸ್ ಇಲಾಖೆ ಹಲವು ಮುಂಜಾಗೃತಾ ಕ್ರಮಕೈಗೊಂಡಿದೆ.

ಇದನ್ನು ಓದಿ: ಮಾರಿಕಾಂಬಾದೇವಿಗೆ ಹಾಕಿದ್ದ ಚಿನ್ನದಸರ ಕಳ್ಳತನ: ಆರೋಪಿಯನ್ನು ಬಂಧಿಸಿದ ಪೊಲೀಸರು

ಹೌದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಈ ಕುರಿತು ಮಾಹಿತಿ ನೀಡಿದ್ದು, ಸದ್ಯ ಉತ್ತರಕನ್ನಡ ಜಿಲ್ಲೆ ಸದ್ಯ ಶಾಂತವಾಗಿಯೇ ಇದೆ. ಜಿಲ್ಲೆಯ ಜನರು ವದಂತಿಗಳಿಗೆ ಕಿವಿಗೊಡಬಾರದು. ಶಾಂತಿ- ಸೌಹಾರ್ದತೆಯಿಂದ ಇರಬೇಕು ಎಂದು ಮನವಿ ಮಾಡಿದರು.

ರಾತ್ರಿ ಸಮಯದಲ್ಲಿ ಗಸ್ತು ತಿರುಗುವ ವೇಳೆ ಯಾರೇ ಅನುಮಾನಾಸ್ಪದ ವ್ಯಕ್ತಿ ಕಂಡುಬಂದಲ್ಲಿ ಅಥವಾ ಯಾವುದೇ ಅಹಿತಕರಘಟನೆಗಳು ನಡೆದಿದ್ದು ಕಂಡುಬಂದಲ್ಲಿ ತಕ್ಷಣವೇ ಪ್ರತಿಕ್ರಿಯಿಸಲು ಸೂಚನೆ ನೀಡಲಾಗಿದೆ. ಚೆಕ್‌ಪೋಸ್ಟ್ ಗಳಲ್ಲಿ ಪರಿಶೀಲಿಸಲು ಬಿಗಿ ಮಾಡಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಭಂಗಕ್ಕೆ ಎಡೆಮಾಡಿಕೊಡುವಂಥ ಸಂದೇಶಗಳನ್ನು ರವಾನಿಸುವವರ ಮೇಲೆ ನಮ್ಮ ನುರಿತ ತಂಡ ಹದ್ದಿನ ಕಣ್ಣಿಟ್ಟಿದೆ ಎಂದರು.

ವಿಸ್ಮಯ ನ್ಯೂಸ್ ಕಾರವಾರ

Back to top button