Follow Us On

WhatsApp Group
Important
Trending

ದೊಡ್ಡ ದೇವರ ಸನ್ನಿಧಿಯಲ್ಲಿ ಶ್ರಾವಣ ಶನಿವಾರದ ವಿಶೇಷ ಪೂಜೆ : ಅನ್ನಸಂತರ್ಪಣೆ

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ

ಅಂಕೋಲಾ: ತಾಲೂಕಿನ ದೊಡ್ಡ ದೇವರೆಂದೇ ಪ್ರಸಿದ್ಧಿಯಾದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಾಳೆ (ದಿನಾಂಕ 30- 07 – 2022 ರಿಂದ )ಶ್ರಾವಣ ಶನಿವಾರದ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.

ಚಲಿಸುತ್ತಿದ್ದ ಲಾರಿಗೆ ಬೆಂಕಿ: ಲಾರಿಯಿಂದ ಹಾರಿ ಪ್ರಾಣ ಉಳಿಸಿಕೊಂಡ ಚಾಲಕ

ಮೊದಲ ಶನಿವಾರ ದಿ. ಆರ್ ಎನ್ ನಾಯಕ ಕುಟುಂಬ ವರ್ಗದವರು, ಎರಡನೇ ಶನಿವಾರ ( 06-08 – 22 ) ರಂದು ಮಂಜುನಾಥ ಹಮ್ಮಣ್ಣ ನಾಯಕ ಅಡ್ಲೂರು, ಮೂರನೇ ಶನಿವಾರ ( 13-08 – 22 ) ರಂದು ಅಂಕೋಲಾ ಫೋಟೋಗ್ರಾಫರ್ಸ್ ಬಳಗದವರು, ಮತ್ತು ಶ್ರಾವಣದ ಕೊನೆಯ ಶನಿವಾರ (20-08 – 22 )ರಂದು ಪುರ್ಲಕ್ಕಿ ಬೇಣದ ಶಾರದಾ ನಾಯಕ ಮತ್ತು ಕುಟುಂಬ ವರ್ಗದವರು ಅನ್ನ ಸಂತರ್ಪಣೆ ಸೇವಾ ಕಾರ್ಯ ನಡೆಸಿಕೊಡಲಿದ್ದು , ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಪರವಾಗಿ ಮೊಕ್ತೇಸರರಾದ ಮಯೂರ್ ಆರ್ ನಾಯಕ ವಿನಂತಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button