ನದಿಯ ಪಕ್ಕ‌ ಗಾಳ ಹಾಕುತ್ತಿದ್ದ ವ್ಯಕ್ತಿಯನ್ನು ಹೊತ್ತೊಯ್ದ ಮೊಸಳೆ: ಮೊಸಳೆ ದಾಳಿಗೆ ಬಲಿಯಾಗುತ್ತಿರುವುದು ಇದು ನಾಲ್ಕನೇಯ ಪ್ರಕರಣ

ಶವ ಪತ್ತೆಗಾಗಿ ನಡೆದಿದೆ ಹುಡುಕಾಟ: ಜನರಲ್ಲಿ ಆತಂಕ

ದಾಂಡೇಲಿ: ಮೀನುಗಾರಿಕೆಂದು ಕಾಳಿ ನದಿಯ ಪಕ್ಕದಲ್ಲಿ ಗಾಳ ಹಾಕುತ್ತಿದ್ದ ವ್ಯಕ್ತಿಯನ್ನು ಮೊಸಳೆಯೊಂದು ಏಕಾಏಕಿ ಎರಗಿ ಎಳೆದು ಕೊಂಡು ಹೋದ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಅಧಿಕಾರಿಗಳು ಹಾಜರಿದ್ದು, ಶೋಧಕಾರ್ಯ ಮುಂದುವರಿಸಿದ್ದಾರೆ. ಸ್ಥಳದಲ್ಲಿ ಆತನ ಚಪ್ಪಲಿ ಮತ್ತು ಛತ್ರಿಗಳು ಬಿದ್ದಿದ್ದು, ಮೊಸಳೆ ದಾಳಿ ಮಾಡುವ ವೇಳೆ ಆತ ಜೋರಾಗಿ ಕೂಗಿಕೊಂಡಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಜನರು ಆಗಮಿಸುತ್ತಿದ್ದು ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮುಂಬಾಗಿಲಿನ ಇಂಟರ್ ಲಾಕ್ ಮುರಿದು ಮನೆಯ ಒಳಗಡೆ ಪ್ರವೇಶಿಸಿದ್ದರು

ಸುರೇಶ್ ವಸಂತ ತೇಲಿ (44) ಮೊಸಳೆ ದಾಳಿಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ., ಕುಟುಂಬಸ್ಥರ ದುಃಖ , ಆಕ್ರಂದನ ಮುಗಿಲು ಮುಟ್ಟಿದೆ. ಮೊಸಳೆ ದಾಳಿಗೆ ಬಲಿಯಾಗುತ್ತಿರುವುದು ಇದು ನಾಲ್ಕನೇಯ ಪ್ರಕರಣ. ಈ ಹಿಂದೆ ಮೊಸಳೆ ದಾಳೆ ನಡೆದ ವೇಳೆ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮಾಹಿತಿ ನೀಡಲಾಗಿದೆ.ಆದರೂ ಜನರು ಎಚ್ಚೆತ್ತುಕೊಳ್ಳದೇ ನದಿಯ ದಂಡೆಯ ಮೇಲೆ ತೆರಳುತ್ತಿರುವುದು ದುರಂತ ಹೆಚ್ಚುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ.

ಬ್ಯೂರೋ‌ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version